ಮುಖದ ತ್ವಚೆ ಅಂದವಾಗಿ ಆಕರ್ಷಕವಾಗಿದ್ದರೆ ನಿಮ್ಮ ಅಂದ ದುಪ್ಪಾಟಾಗುತ್ತದೆ. ಹಾಗಾಗಿ ಯಾವಾಗಲೂ ಮುಖದ ಚರ್ಮದ ಆರೈಕೆ ಮಾಡಿ. ಆದರೆ ಮುಖಕ್ಕೆ ಹಚ್ಚುವಂತಹ ಪದಾರ್ಥಗಳನ್ನು ಸರಿಯಾದ ಸಮಯದಲ್ಲಿ ಹಚ್ಚಿ. ಇಲ್ಲವಾದರೆ ಅದರಿಂದ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ ಹಗಲಿನ ವೇಳೆ ಈ ಪದಾರ್ಥಗಳನ್ನು ಮುಖಕ್ಕೆ ಹಚ್ಚಬೇಡಿ.
*ಎಕ್ಸ್ ಫೊಲಿಯೇಟಿಂಗ್ ಆಮ್ಲಗಳು : ಚರ್ಮವನ್ನು ಎಪ್ಪೋಲಿಯೇಟಿಂಗ್ ಮಾಡಲು ಬಳಸುವಂತಹ ಆಮ್ಲಗಳು ಸತ್ತ ಚರ್ಮದ ಕೋಶಗಳನ್ನು ನಿವಾರಿಸಿ ಆರೋಗ್ಯಕರ ಹೊಸ ಚರ್ಮದ ಕೋಶಗಳ ರಚನೆಗೆ ಸಹಕರಿಸುತ್ತದೆ. ಆದರೆ ಇವುಗಳು ಶಾಖ, ಗಾಳಿ, ಮತ್ತು ಬೆಳಕಿಗೆ ಚರ್ಮವನ್ನು ಸೂಕ್ಷ್ಮವಾಗಿಸುತ್ತದೆ.
*ಫೇಸ್ ಆಯಿಲ್ : ಇದು ಎಸೆನ್ಸಿಯಲ್ ಆಯಿಲ್ ಗಳನ್ನು ಒಳಗೊಂಡಿರುತ್ತದೆ. ಇದು ಚರ್ಮವನ್ನು ಹೈಡ್ರೀಕರಿಸಿ ತೇವಾಂಶವನ್ನು ಲಾಕ್ ಮಾಡುತ್ತದೆ. ಆದರೆ ಬಿಸಿಲಿಗೆ ಹೋದಾಗ ಇದರಿಂದ ಚರ್ಮಕ್ಕೆ ಧೂಳು, ಬ್ಯಾಕ್ಟೀರಿಯಾ ಅಂಟಿಕೊಂಡು ಚರ್ಮದ ಕಿರಿಕಿರಿ ಉಂಟಾಗುತ್ತದೆ.