ಕೂದಲಿಗೆ ಎಣ್ಣೆ ಮಸಾಜ್ ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಮಸಾಜ್ ಬಳಿಕ ಕೂದಲನ್ನು ಚೆನ್ನಾಗಿ ವಾಶ್ ಮಾಡಬೇಕು.
ಇಲ್ಲವಾದರೆ ಕೂದಲಿನಲ್ಲಿ ಜಿಗುಟು, ಕೊಳೆ ಕುಳಿತುಕೊಂಡು ಕೂದಲು ಉದುರಿ ಹೋಗುತ್ತದೆ. ಈ ಕೂದಲಿನ ಎಣ್ಣೆಯಂಶವನ್ನು ನಿವಾರಿಸಲು ಈ ಟಿಪ್ ಫಾಲೋ ಮಾಡಿ.
*ನಿಮ್ಮ ಕೂದಲಿನ ಮೇಲಿನ ಹೆಚ್ಚುವರಿ ಎಣ್ಣೆಯನ್ನು ತೆಗೆದು ಹಾಕಲು ಅಡುಗೆ ಸೋಡಾವನ್ನು ಬಳಸಿ. ಸ್ವಲ್ಪ ಅಡುಗೆ ಸೋಡಾವನ್ನು ತೆಗೆದುಕೊಂಡು ಅದಕ್ಕೆ ನೀರು ಹಾಕಿ ಪೇಸ್ಟ್ ತಯಾರಿಸಿ. ಅದನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಇದನ್ನು 20 ನಿಮಷಗಳ ಕಾಲ ಇರಿಸಿ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
*ಒಂದು ಪಾತ್ರೆಯಲ್ಲಿ ಸಮಾನ ಪ್ರಮಾಣದಲ್ಲಿ ನೀರು ಮತ್ತು ಆಪಲ್ ಸೈಡರ್ ವಿನೆಗರ್ ಸೇರಿಸಿ. ಇದನ್ನು ಸ್ಪ್ರೇ ಬಾಟಲಿಗೆ ತುಂಬಿಸಿ ಅದನ್ನು ನೆತ್ತಿಗೆ ಹಚ್ಚಿ 15 ನಿಮಿಷಗಳ ಕಾಲ ಇರಿಸಿ ಬಳಿಕ ವಾಶ್ ಮಾಡಿ.