ಸಾಮಾನ್ಯವಾಗಿ ಚಳಿಗಾಲದಲ್ಲಿನ ಶುಷ್ಕ ವಾತಾವರಣ ಚರ್ಮದಲ್ಲಿನ ತೇವಾಂಶವನ್ನು ಹೀರಿಕೊಂಡು ಚರ್ಮವನ್ನು ಡ್ರೈ ಮಾಡುತ್ತದೆ. ಇದರಿಂದ ಚರ್ಮ ಕಂದು ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಈ ಕಂದು ಬಣ್ಣದ ಚರ್ಮಗಳನ್ನು ನಿವಾರಿಸಿ ಚಳಿಗಾಲದಲ್ಲಿಯೂ ಚರ್ಮ ಬೆಳ್ಳಗಾಗಿರುವಂತೆ ಮಾಡಲು ಈ ಫೇಸ್ ಪ್ಯಾಕ್ ಗಳನ್ನು ಹಚ್ಚಿ.
*ಅರಶಿನ, ಕಡಲೆಹಿಟ್ಟು ಮತ್ತು ಗ್ಲಿಸರಿನ್ ಬಳಸಿ ತಯಾರಿಸಿದ ಫೇಸ್ಟ್ ಪ್ಯಾಕ್ ನ್ನು ಮುಖಕ್ಕೆ ಹಚ್ಚಿದರೆ ಇದು ನೈಸರ್ಗಿಕ ಬ್ಲೀಚ್ ಆಗಿ ಕೆಲಸ ಮಾಡುವುದರಿಂದ ಚಳಿಗಾಲದಲ್ಲಿ ಕಂದು ಚರ್ಮ ನಿವಾರಣೆಯಾಗುತ್ತದೆ. ಹಾಗೇ ಗ್ಲಿಸರಿನ್ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.
*ಬಾಳೆಹಣ್ಣಿನ ಪೇಸ್ಟ್ ಗೆ ಹಾಲು ಮತ್ತು ನಿಂಬೆ ರಸ ಮಿಕ್ಸ್ ಮಾಡಿ ಇದನ್ನು ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿ ಇದನ್ನು ವಾರದಲ್ಲಿ 2 ಬಾರಿ ಮಾಡಿ.
*ಕಡಲೆ ಹಿಟ್ಟಿಗೆ 1 ಚಿಟಿಕೆ ಅರಶಿನ, 1 ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಒಣಗಲು ಬಿಟ್ಟು ವಾಶ್ ಮಾಡಿದರೆ ಮುಖದ ಕಂದು ಬಣ್ಣ ನಿವಾರಣೆಯಾಗಿ ಮುಖದಲ್ಲಿ ಹೊಳಪು ಮೂಡುತ್ತದೆ.