alex Certify ‘ದಿ ಕಾಶ್ಮೀರ್ ಫೈಲ್ಸ್’ ಕುರಿತ ಇಸ್ರೇಲಿ ನಿರ್ದೇಶಕನ ಹೇಳಿಕೆ; ಕ್ಷಮೆ ಯಾಚಿಸಿದ ಇಸ್ರೇಲ್ ರಾಯಭಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದಿ ಕಾಶ್ಮೀರ್ ಫೈಲ್ಸ್’ ಕುರಿತ ಇಸ್ರೇಲಿ ನಿರ್ದೇಶಕನ ಹೇಳಿಕೆ; ಕ್ಷಮೆ ಯಾಚಿಸಿದ ಇಸ್ರೇಲ್ ರಾಯಭಾರಿ

ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಇಸ್ರೇಲಿ ನಿರ್ದೇಶಕ ನಾದವ್ ಲಾಪಿಡ್, ದಿ ಕಾಶ್ಮೀರಿ ಫೈಲ್ಸ್ ಚಿತ್ರದ ಕುರಿತಂತೆ ನೀಡಿದ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರ ಒಂದು ಅಸಭ್ಯ ಮತ್ತು ಪ್ರಚಾರದ ಉದ್ದೇಶವುಳ್ಳ ಸಿನಿಮಾ ಎಂಬ ಅವರ ಹೇಳಿಕೆಗೆ ಇಸ್ರೇಲ್ ರಾಯಭಾರಿಯಿಂದಲೇ ಖಂಡನೆ ವ್ಯಕ್ತವಾಗಿದೆ.

ತಮ್ಮ ದೇಶದ ನಿರ್ದೇಶಕನ ಹೇಳಿಕೆಯನ್ನು ವಿರೋಧಿಸಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬಹಿರಂಗ ಪತ್ರ ಬರೆದಿರುವ ಭಾರತದಲ್ಲಿನ ಇಸ್ರೇಲ್ ರಾಯಭಾರಿ ನಔರ್ ಗಿಲೋನ್, ಆತನೊಬ್ಬ ದೇಶ ವಿರೋಧಿ ನಿರ್ದೇಶಕ. ಭಾರತ ನೀಡಿದ ಆಹ್ವಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ನಂಬಿಕೆಗೆ ದ್ರೋಹ ಬಗೆದಿದ್ದಾನೆ ಎಂದು ಕಿಡಿ ಕಾರಿದ್ದಾರೆ.

ಇನ್ನು ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಸವಾಲು ಹಾಕಿದ್ದು ಒಂದು ವೇಳೆ ಕಾಶ್ಮೀರ ಹತ್ಯಾಕಾಂಡ ಸುಳ್ಳು. ಚಿತ್ರದಲ್ಲಿರುವ ವಿಷಯ ಸುಳ್ಳು ಎಂದು ಯಾರಾದರೂ ಸಾಬೀತುಪಡಿಸಿದರೆ ನಾನು ಚಿತ್ರರಂಗವನ್ನೇ ತೊರೆಯುತ್ತೇನೆ ಎಂದು ಹೇಳಿದ್ದಾರೆ. ನಟ ಅನುಪಮ್ ಖೇರ್ ಕೂಡಾ ಇಸ್ರೇಲಿ ನಿರ್ದೇಶಕನ ಹೇಳಿಕೆಯನ್ನು ಖಂಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...