alex Certify ತಮ್ಮದೇ ನಿರ್ಮಾಣ ಸಂಸ್ಥೆ ತೊರೆದ ಅನುಷ್ಕಾ…! ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮದೇ ನಿರ್ಮಾಣ ಸಂಸ್ಥೆ ತೊರೆದ ಅನುಷ್ಕಾ…! ಇದರ ಹಿಂದಿದೆ ಈ ಕಾರಣ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕ್ಲೀನ್ ಸ್ಲೇಟ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯಿಂದ ಹೊರನಡೆದಿದ್ದು, ಅವರ ಈ ನಡೆ ಅಚ್ಚರಿಗೆ ಕಾರಣವಾಗಿದೆ. 2013 ರಲ್ಲಿ ನಟಿ ಅನುಷ್ಕಾ ಶರ್ಮಾ ತಮ್ಮ ಸಹೋದರ ಕರ್ಣೇಶ್ ಶರ್ಮಾ ಜತೆಗೂಡಿ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಎಂಬ ಬ್ಯಾನರ್ ನ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು.

ಹಲವು ಸಿನಿಮಾವನ್ನು ಈ ಸಂಸ್ಥೆಯಡಿ ನಿರ್ಮಿಸಲಾಗಿತ್ತು. ಇತ್ತೀಚೆಗೆ ಒಮ್ಮೆಲೆ 8 ಸಿನಿಮಾಗಳನ್ನು ಕ್ಲೀನ್ ಸ್ಲೇಟ್ ಫಿಲ್ಮ್ಸ್ ನಿರ್ಮಿಸುತ್ತಿರುವುದಾಗಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಅನುಷ್ಕಾ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ತೊರೆದಿದ್ದಾರೆ.

BIG NEWS: ಈ ದೇಶದಲ್ಲಿ ಮೂರೇ ದಿನಗಳಲ್ಲಿ 14 ಲಕ್ಷ ಕೊರೊನಾ ಕೇಸ್‌; ಭಾರತಕ್ಕೂ ಬರಬಹುದು ನಾಲ್ಕನೇ ಅಲೆ

ಈ ಬಗ್ಗೆ ಸ್ವತಃ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು, ಈ ಹಿಂದೆ ನನ್ನ ಸಹೋದರನ ಜತೆ ಸೇರಿ ಕ್ಲೀನ್ ಸ್ಲೇಟ್ ಫಿಲ್ಮ್ಸ್ ನ್ನು ಪ್ರಾರಂಭಿಸಿದೆ. ಆಗ ನಾವು ನಿರ್ಮಾಣದ ವಿಚಾರದಲ್ಲಿ ಹೊಸಬರು. ಆದರೂ ನಮ್ಮ ಜರ್ನಿ ನೋಡಿದಾಗ ನಮ್ಮ ಸಾಧನೆ ನೋಡಿ ಖುಷಿಯಾಗುತ್ತದೆ. ಇದರಲ್ಲಿ ಕರ್ಣೇಶ್ ಕೊಡುಗೆ ಅಪಾರ. ನನಗೆ ಎಷ್ಟೇ ಸಮಯವಿದ್ದರೂ ಆ ಸಮಯವನ್ನು ನಟನೆಗೆ ಮೀಸಲಿಡುತ್ತೇನೆ. ಹಾಗಾಗಿ ಕ್ಲೀನ್ ಸ್ಲೇಟ್ ಫಿಲ್ಮ್ಸ್ ನಿಂದ ನಾನು ಹೊರಬರುತ್ತೇನೆ. ಇನ್ನುಮುಂದೆ ಕರ್ಣೇಶ್ ಈ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...