
ಅನೇಕ ಬಾರಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡದೇ ಇದ್ದಾಗ ಅನುಷ್ಕಾ ಶರ್ಮಾರನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದೂ ಸಹ ಇದೆ. ಆದರೆ ಈ ಬಾರಿ ಮಾತ್ರ ಅನುಷ್ಕಾ ಶರ್ಮಾ ಹೆಸರು ಬಿಸಿಸಿಐನ ಟ್ವೀಟ್ನಿಂದಾಗಿ ವೈರಲ್ ಆಗಿದೆ.
ಅನುಷ್ಕಾ ಶರ್ಮಾ 88 ರನ್ಗಳಲ್ಲಿ 52 ರನ್ ಗಳಿಸಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿತ್ತು. ಇದನ್ನು ನೋಡಿದ ನೆಟ್ಟಿಗರು. ಅರ್ರೆ..! ಅನುಷ್ಕಾ ಶರ್ಮಾ ನಟನಾ ವೃತ್ತಿಯನ್ನು ಬಿಟ್ಟು ಕ್ರಿಕೆಟ್ಗೆ ಯಾವಾಗ ಮರಳಿದ್ರು ಎಂದು ಪ್ರಶ್ನೆ ಮಾಡಿದ್ದಾರೆ.
ಅಸಲಿಗೆ ಅಂಡರ್ 19 ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ಇದರಲ್ಲಿ ಭಾರತದ ಬಿ ತಂಡದ ನಾಯಕಿಯ ಹೆಸರು ಅನುಷ್ಕಾ ಶರ್ಮಾ ಆಗಿದೆ. ಅಂಡರ್ 19 ಅಂತರರಾಜ್ಯ ಪಂದ್ಯದ ಬಳಿಕ ಬಿಸಿಸಿಐ 2021-22ನೇ ಸಾಲಿನ ಅಂಡರ್ 19 ಏಕದಿನ ಚಾಲೆಂಜರ್ ಟ್ರೋಫಿ ಆಯೋಜಿಸಿದೆ. ಅಂತರರಾಜ್ಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಮಹಿಳಾ ಕ್ರಿಕೆಟಿಗರನ್ನು ಇಲ್ಲಿ ತಂಡ ಎ,ಬಿ,ಸಿ ಹಾಗೂ ಡಿ ಎಂದು ವಿಂಗಡಿಸಲಾಗಿದೆ. ಹೀಗಾಗಿಯೇ ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಈ ರೀತಿಯಾಗಿ ಟ್ವೀಟ್ ಮಾಡಿತ್ತು.
https://twitter.com/UN_PrEdiTAble/status/1455418127253078017