alex Certify ಕ್ರಿಕೆಟ್​​ ಜೀವನಕ್ಕೆ ಕಾಲಿಟ್ಟರಾ ನಟಿ ಅನುಷ್ಕಾ ಶರ್ಮಾ..? ಗೊಂದಲ ಸೃಷ್ಟಿಸಿದ ಬಿಸಿಸಿಐ ಟ್ವೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್​​ ಜೀವನಕ್ಕೆ ಕಾಲಿಟ್ಟರಾ ನಟಿ ಅನುಷ್ಕಾ ಶರ್ಮಾ..? ಗೊಂದಲ ಸೃಷ್ಟಿಸಿದ ಬಿಸಿಸಿಐ ಟ್ವೀಟ್

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಪತ್ನಿ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಕ್ರಿಕೆಟ್​ ಹಿನ್ನೆಲೆಯನ್ನು ಅನುಷ್ಕಾ ಹೊಂದಿಲ್ಲವಾದರೂ ಸಹ ಕೊಹ್ಲಿ ಕಾರಣಕ್ಕೆ ಇವರು ಕ್ರಿಕೆಟ್​ ಲೋಕದಲ್ಲಿಯೂ ಸುದ್ದಿಯಲ್ಲಿರ್ತಾರೆ.

ಅನೇಕ ಬಾರಿ ಮೈದಾನದಲ್ಲಿ ವಿರಾಟ್​ ಕೊಹ್ಲಿ ಉತ್ತಮ ಪ್ರದರ್ಶನ ನೀಡದೇ ಇದ್ದಾಗ ಅನುಷ್ಕಾ ಶರ್ಮಾರನ್ನು ಕೆಟ್ಟದಾಗಿ ಟ್ರೋಲ್​ ಮಾಡಿದ್ದೂ ಸಹ ಇದೆ. ಆದರೆ ಈ ಬಾರಿ ಮಾತ್ರ ಅನುಷ್ಕಾ ಶರ್ಮಾ ಹೆಸರು ಬಿಸಿಸಿಐನ ಟ್ವೀಟ್​ನಿಂದಾಗಿ ವೈರಲ್​ ಆಗಿದೆ.

ಅನುಷ್ಕಾ ಶರ್ಮಾ 88 ರನ್​ಗಳಲ್ಲಿ 52 ರನ್​ ಗಳಿಸಿದ್ದಾರೆ ಎಂದು ಬಿಸಿಸಿಐ ಟ್ವೀಟ್​ ಮಾಡಿತ್ತು. ಇದನ್ನು ನೋಡಿದ ನೆಟ್ಟಿಗರು. ಅರ್ರೆ..! ಅನುಷ್ಕಾ ಶರ್ಮಾ ನಟನಾ ವೃತ್ತಿಯನ್ನು ಬಿಟ್ಟು ಕ್ರಿಕೆಟ್​ಗೆ ಯಾವಾಗ ಮರಳಿದ್ರು ಎಂದು ಪ್ರಶ್ನೆ ಮಾಡಿದ್ದಾರೆ.

ಅಸಲಿಗೆ ಅಂಡರ್​ 19 ಕ್ರಿಕೆಟ್​ ಪಂದ್ಯಾವಳಿ ನಡೆಯುತ್ತಿದ್ದು, ಇದರಲ್ಲಿ ಭಾರತದ ಬಿ ತಂಡದ ನಾಯಕಿಯ ಹೆಸರು ಅನುಷ್ಕಾ ಶರ್ಮಾ ಆಗಿದೆ. ಅಂಡರ್​ 19 ಅಂತರರಾಜ್ಯ ಪಂದ್ಯದ ಬಳಿಕ ಬಿಸಿಸಿಐ 2021-22ನೇ ಸಾಲಿನ ಅಂಡರ್​ 19 ಏಕದಿನ ಚಾಲೆಂಜರ್​ ಟ್ರೋಫಿ ಆಯೋಜಿಸಿದೆ. ಅಂತರರಾಜ್ಯ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಮಹಿಳಾ ಕ್ರಿಕೆಟಿಗರನ್ನು ಇಲ್ಲಿ ತಂಡ ಎ,ಬಿ,ಸಿ ಹಾಗೂ ಡಿ ಎಂದು ವಿಂಗಡಿಸಲಾಗಿದೆ. ಹೀಗಾಗಿಯೇ ಬಿಸಿಸಿಐ ತನ್ನ ಟ್ವಿಟರ್​ ಖಾತೆಯಲ್ಲಿ ಈ ರೀತಿಯಾಗಿ ಟ್ವೀಟ್​ ಮಾಡಿತ್ತು.

— Kushagra (@45kusha) November 2, 2021

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...