alex Certify ಭಿಕ್ಷಾಟನೆ ಮಾಡುತ್ತಿದ್ದಾಕೆಯ ಇಂಗ್ಲೀಷ್​​ಗೆ ಮನಸೋತ ಅನುಪಮ್​ ಖೇರ್​ ; ‘ಆರತಿ’ ಬಾಳಿಗೆ ಬೆಳಕಾದ ಹಿರಿಯ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಿಕ್ಷಾಟನೆ ಮಾಡುತ್ತಿದ್ದಾಕೆಯ ಇಂಗ್ಲೀಷ್​​ಗೆ ಮನಸೋತ ಅನುಪಮ್​ ಖೇರ್​ ; ‘ಆರತಿ’ ಬಾಳಿಗೆ ಬೆಳಕಾದ ಹಿರಿಯ ನಟ

ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್​​ ಸೋಶಿಯಲ್​ ಮೀಡಿಯಾದಲ್ಲಿ ಯಾವಾಗಲು ಸುದ್ದಿಯಲ್ಲಿರ್ತಾರೆ. ಖೇರ್​ ಇತ್ತೀಚಿಗಷ್ಟೇ ವಿಡಿಯೋವಂದನ್ನು ಶೇರ್​ ಮಾಡಿದ್ದು ಇದನ್ನು ನೋಡಿದ ನೆಟ್ಟಿಗರು ಅನುಪಮ್​ ಖೇರ್​ ಮಾನವೀಯತೆಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

ಅನುಪಮ್​ ಖೇರ್​ ಕೆಲದಿನಗಳ ಹಿಂದಷ್ಟೇ ಕಾಠ್ಮಂಡುವಿಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ಅವರು ಭಿಕ್ಷುಕಿ ಬಾಲಕಿಯನ್ನು ಭೇಟಿಯಾಗಿದ್ದರು. ಈಕೆ ಅತ್ಯಂತ ನಿರರ್ಗಳವಾಗಿ ಇಂಗ್ಲೀಷ್​ ಭಾಷೆ ಮಾತನಾಡುವ ಸಾಮರ್ಥ್ಯ ಹೊಂದಿದ್ದಳು. ಈಕೆ ತನಗೆ ಓದಿನಲ್ಲಿ ಮುಂದುವರಿಯಬೇಕೆಂಬ ಆಸೆ ಇದೆ ಎಂದು ಹೇಳಿದ್ದಳು. ಆಕೆಯ ಆಸೆಯನ್ನು ಪೂರ್ಣಗಳಿಸುವುದಾಗಿ ಅನುಪಮ್​ ಖೇರ್​ ಮಾತು ಕೊಟ್ಟಿದ್ದಾರೆ.

ಈ ವಿಡಿಯೋವನ್ನು ಶೇರ್​ ಮಾಡಿರುವ ಅನುಪಮ್​ ಖೇರ್​, ಕಾಠ್ಮಂಡುವಿನ ದೇವಸ್ಥಾನದ ಹೊರಭಾಗದಲ್ಲಿ ನಾನು ಆರತಿಯನ್ನು ಭೇಟಿ ಮಾಡಿದೆ. ಈಕೆ ಮೂಲತಃ ರಾಜಸ್ಥಾನದವಳು. ಆಕೆ ನನ್ನ ಬಳಿ ಹಣ ಬೇಡಿದಳು ಹಾಗೂ ನನ್ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಳು. ಇದಾದ ಬಳಿಕ ಆಕೆ ನಿರರ್ಗಳವಾಗಿ ಇಂಗ್ಲೀಷ್​ನಲ್ಲಿ ಮಾತನಾಡಲು ಆರಂಭಿಸಿದಳು. ಇದನ್ನು ನೋಡಿ ನಾನು ಆಶ್ಚರ್ಯಚಕಿತನಾದೆ. ಆಕೆ ತನ್ನ ವ್ಯಾಸಂಗದ ಕನಸಿನ ಬಗ್ಗೆ ಹೇಳಿಕೊಂಡಳು. ಇದಾದ ಬಳಿಕ ಅನುಪಮ್​ ಖೇರ್​ ಫೌಂಡೇಷನ್​ ಆಕೆಯ ವ್ಯಾಸಂಗದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ನಿರ್ಧರಿಸಿದೆ ಎಂದು ಶೀರ್ಷಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...