alex Certify ನಮ್ಮ ಅಡುಗೆ ಮನೆಯಲ್ಲೇ ಇದೆ ಎಂಟಿಬಯೊಟಿಕ್ಸ್‌; ಇದು ಅನೇಕ ರೋಗಗಳಿಗೆ ಪರಿಣಾಮಕಾರಿ ಮದ್ದು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮ ಅಡುಗೆ ಮನೆಯಲ್ಲೇ ಇದೆ ಎಂಟಿಬಯೊಟಿಕ್ಸ್‌; ಇದು ಅನೇಕ ರೋಗಗಳಿಗೆ ಪರಿಣಾಮಕಾರಿ ಮದ್ದು….!

ದೇಶಾದ್ಯಂತ ಮತ್ತೆ ಕೊರೊನಾ ಆರ್ಭಟ ಶುರುವಾಗಿದೆ. ಕೋವಿಡ್‌ ಜೊತೆಗೆ ಇತರ ಸಾಂಕ್ರಾಮಿಕ ರೋಗಗಳು ಕೂಡ ಈ ಋತುವಿನಲ್ಲಿ ವೇಗವಾಗಿ ಹರಡುತ್ತವೆ. ಇವುಗಳಿಂದ ಪಾರಾಗಲು ಅನೇಕರು ಎಂಟಿಬಯೊಟಿಕ್ಸ್‌ ತೆಗೆದುಕೊಳ್ಳುತ್ತಾರೆ. ಆದರೆ ಈ ಎಂಟಿಬಯೊಟಿಕ್ಸ್‌ ನಮ್ಮ ಯಕೃತ್ತಿನ ಮೇಲೆ ನೇರ ಪರಿಣಾಮ ಬೀರುತ್ತದೆ.

ಹಾಗಾಗಿ ಮನೆಯಲ್ಲೇ ಲಭ್ಯವಿರುವ ದೇಹವನ್ನು ರಕ್ಷಿಸಬಲ್ಲ ನೈಸರ್ಗಿಕ ಪ್ರತಿಜೀವಕಗಳನ್ನು ಸೇವಿಸಬೇಕು. ಅಡುಗೆಮನೆಯಲ್ಲಿ ಇರುವಂತಹ ಕೆಲವು ಆ್ಯಂಟಿಬಯೋಟಿಕ್‌ಗಳ ಬಗ್ಗೆ ತಿಳಿದುಕೊಳ್ಳೋಣ. ಅದು ನಮ್ಮ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.

ತುಳಸಿ ಎಲೆಗಳುಎಂಟಿಬ್ಯಾಕ್ಟೀರಿಯಲ್, ಎಂಟಿವೈರಸ್ ಮತ್ತು ಎಂಟಿಫಂಗಲ್ ಗುಣಲಕ್ಷಣಗಳು ತುಳಸಿ ಎಲೆಗಳಲ್ಲಿವೆ. ಇದು ನಮ್ಮ ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ಗಂಟಲು ನೋವು, ಕೆಮ್ಮು ಅಥವಾ ಉಸಿರಾಟದಲ್ಲಿ ಯಾವುದೇ ಸಮಸ್ಯೆಯಿದ್ದರೆ ತುಳಸಿ ಬಹಳ ಪ್ರಯೋಜನಕಾರಿಯಾಗಿದೆ. ಇದನ್ನು ರೋಗನಿರೋಧಕ ಶಕ್ತಿವರ್ಧಕ ಎಂದೂ ಕರೆಯುತ್ತಾರೆ. ತುಳಸಿ ಎಲೆಗಳನ್ನು ಅಗಿದು ತಿನ್ನಬಹುದು ಅಥವಾ ತುಳಸಿ ಎಲೆಗಳನ್ನು ಸ್ಮೂಥಿ, ಜ್ಯೂಸ್‌ನಲ್ಲಿ ಸೇರಿಸಿಕೊಂಡು ಸೇವಿಸಬಹುದು.

ಕಹಿಬೇವು ತುಳಸಿಯಂತೆ  ಕಹಿಬೇವು ಸಹ ನೈಸರ್ಗಿಕ ಪ್ರತಿಜೀವಕಗಳನ್ನು ಹೊಂದಿದೆ. ಇದು ನಮ್ಮ ದೇಹದಲ್ಲಿ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ. ಗಾಯಗಳನ್ನು ಸಹ ಗುಣಪಡಿಸುತ್ತದೆ. ಬೇವಿನ ಎಲೆಗಳನ್ನು ಜಗಿದು ತಿನ್ನಬಹುದು, ಅದನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ.

ಕರಿಬೇವು – ಕರಿಬೇವಿನ ಎಲೆಗಳನ್ನು ನಾವು ಅಡುಗೆಗೆ ಬಳಸುತ್ತೇವೆ. ಇದು ರುಚಿಯನ್ನು ಹೆಚ್ಚಿಸುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ. ಕರಿಬೇವು ನಮ್ಮ ದೇಹವನ್ನು ಶಿಲೀಂಧ್ರ ಮತ್ತು ಉರಿಯೂತದಿಂದ ರಕ್ಷಿಸುತ್ತದೆ. ನಿತ್ಯದ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಬಳಸಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕಾರು ಕರಿಬೇವಿನ ಎಲೆಗಳನ್ನು ಜಗಿದು ತಿನ್ನಬಹುದು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...