alex Certify ಲಂಡನ್ ನಲ್ಲಿ ಕೂಚಿಪುಡಿ ನೃತ್ಯ ಮಾಡಿದ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಡನ್ ನಲ್ಲಿ ಕೂಚಿಪುಡಿ ನೃತ್ಯ ಮಾಡಿದ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಪುತ್ರಿ

ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರ ಪುತ್ರಿ ಅನೌಷ್ಕ ಸುನಾಕ್ ಲಂಡನ್ ನಲ್ಲಿ ನಡೆದ ರಂಗ್ ಅಂತರಾಷ್ಟ್ರೀಯ ನೃತ್ಯ ಕಾರ್ಯಕ್ರಮದಲ್ಲಿ ಕೂಚಿಪುಡಿ ಪ್ರದರ್ಶನ ನೀಡಿದ್ದಾರೆ.

ಖ್ಯಾತ ಕೂಚಿಪುಡಿ ನೃತ್ಯ ಕಲಾವಿದೆ ಅರುಣಿಮಾ ಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 4 ರಿಂದ 85 ವರ್ಷದೊಳಗಿನ ನೂರಕ್ಕೂ ಅಧಿಕ ಕಲಾವಿದರು ಭಾಗವಹಿಸಿದ್ದರು.

ಪುತ್ರಿಯ ಕೂಚಿಪುಡಿ ನೃತ್ಯ ಕಾರ್ಯಕ್ರಮ ನೋಡಲು ಅಕ್ಷತಾ ಮೂರ್ತಿ ಆಗಮಿಸಿದ್ದು, ಇವರೊಂದಿಗೆ ರಿಷಿ ಸುನಾಕ್ ಅವರ ಪೋಷಕರೂ ಸಹ ಇದ್ದರು.

ಅನೌಷ್ಕಾ ಇತರೆ ನೃತ್ಯಗಾರ್ತಿಯರೊಂದಿಗೆ ಕೂಚಿಪುಡಿ ಪ್ರದರ್ಶನ ನೀಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿಯನ್ನು ಮರೆಯದಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...