alex Certify ನಾಳೆ ಬಿಡುಗಡೆಯಾಗುತ್ತಿದೆ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಮತ್ತೊಂದು ಗೀತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ಬಿಡುಗಡೆಯಾಗುತ್ತಿದೆ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಮತ್ತೊಂದು ಗೀತೆ

ಟ್ರೈಲರ್ ನಲ್ಲಿ 'ಫಾರ್ ರಿಜಿಸ್ಟ್ರೇಷನ್'..ಫೆ.23ಕ್ಕೆ ಪೃಥ್ವಿ-ಮಿಲನಾ ಸಮ್ಮಿಲನ.. – PopcornKannada

ನವೀನ್ ದ್ವಾರಕನಾಥ್ ನಿರ್ದೇಶನದ ಪೃಥ್ವಿ ಅಂಬಾರ್ ಅಭಿನಯದ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ‘ಒಂದೇ ಒಂದು ಸಾರಿ’ ಎಂಬ ಲಿರಿಕಲ್ ಸಾಂಗ್ ನಾಳೆ ಜನ್ಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ನಟಿ ಮಿಲನ ನಾಗರಾಜ್ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ರವಿಶಂಕರ್, ಸುಧಾ ಬೆಳವಾಡಿ, ತಬಲ ನಾಣಿ, ಬಾಬು ಈರಣ್ಣಯ್ಯ, ಸ್ವಾತಿ, ರಮೇಶ್ ಭಟ್, ಸಿಹಿ ಕಹಿ ಚಂದ್ರು, ಅರವಿಂದ್, ಬ್ಯಾಂಕ್ ಜನಾರ್ದನ್ ಉಳಿದ ಪಾತ್ರವರ್ಗದಲ್ಲಿದ್ದಾರೆ. ನಿಶ್ಚಲ್ ಫಿಲಂಸ್ ಬ್ಯಾನರ್ ನಡಿ ನವೀನ್ ರಾವ್ ನಿರ್ಮಾಣ ಮಾಡಿದ್ದಾರೆ. ಮನು ಸಂಕಲನ, ಅಭಿಲಾಶ್ ಕಲ್ಲತ್ತಿ ಹಾಗೂ ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ. ಆರ್ ಕೆ ಹರೀಶ್ ಸಂಗೀತ ಸಂಯೋಜನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...