ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಈಗಾಗಲೇ ಕಂಗೆಟ್ಟು ಹೋಗಿದ್ದಾರೆ. ಬಹುತೇಕ ಎಲ್ಲ ವಸ್ತುಗಳ ಬೆಲೆಯೂ ಮುಗಿಲುಮುಟ್ಟಿದ್ದು, ಟೊಮೆಟೊ ದರ ಈಗಾಗಲೇ ಕೆಜಿಗೆ 150 ರೂಪಾಯಿಗಳನ್ನು ದಾಟಿದೆ. ಇದರ ಮಧ್ಯೆ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ.
ಈ ತಿಂಗಳ ಅಂತ್ಯಕ್ಕೆ ಈರುಳ್ಳಿ ಬಲು ದುಬಾರಿಯಾಗಲಿದೆ ಎನ್ನಲಾಗಿದ್ದು, ಕ್ರಿಸಿಲ್ ಸಂಸ್ಥೆಯ ಅಧ್ಯಯನ ವರದಿಯಲ್ಲಿ ಈ ವಿಚಾರ ತಿಳಿಸಲಾಗಿದೆ. ಕೆಜಿಗೆ 60 ರಿಂದ 70 ರೂಪಾಯಿಗಳವರೆಗೆ ಏರಿಕೆ ಕಾಣಲಿದೆ ಎಂದು ಹೇಳಲಾಗಿದ್ದು, ಬೆಲೆ ಏರಿಕೆಗೆ ಪೂರೈಕೆಯ ಕೊರತೆ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ.
ಮಾರುಕಟ್ಟೆಯಲ್ಲಿ ಹಿಂಗಾರು ಬೆಳೆಯ ಈರುಳ್ಳಿ ಸಂಗ್ರಹ ಆಗಸ್ಟ್ ಅಂತ್ಯದ ವೇಳೆಗೆ ಗಣನೀಯವಾಗಿ ಕಡಿಮೆ ಆಗಲಿದ್ದು ಎನ್ನಲಾಗಿದ್ದು, ಮುಂಗಾರು ಅವಧಿಯ ಈರುಳ್ಳಿ ಬೆಳೆ ಅಕ್ಟೋಬರ್ ನಿಂದ ಮಾರುಕಟ್ಟೆಗೆ ಬರಲಿದೆ. ಹೀಗಾಗಿ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಸಾಧ್ಯವಾಗದ ಕಾರಣ ಆಗಸ್ಟ್ ಅಂತ್ಯದ ವೇಳೆಗೆ ಬೆಲೆ ಏರಿಕೆಯಾಗಲಿದ್ದು, ಅಕ್ಟೋಬರ್ – ಡಿಸೆಂಬರ್ ವೇಳೆಗೆ ಬೆಲೆ ಸ್ಥಿರತೆ ಹಂತ ತಲುಪುವ ನಿರೀಕ್ಷೆ ಇದೆ ಎನ್ನಲಾಗಿದೆ.