alex Certify ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ವರಮಹಾಲಕ್ಷ್ಮೀ ಹಬ್ಬಕ್ಕೆ ಹೂ-ಹಣ್ಣಿನ ದರ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ವರಮಹಾಲಕ್ಷ್ಮೀ ಹಬ್ಬಕ್ಕೆ ಹೂ-ಹಣ್ಣಿನ ದರ ಏರಿಕೆ

ಬೆಂಗಳೂರು : ದಿನನಿತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ವರಮಹಾಲಕ್ಷ್ಮೀ ಹಬ್ಬಕ್ಕೆ ಹೂ-ಹಣ್ಣಿನ ದರ ಕೂಡ ಏರಿಕೆಯಾಗಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ರಾಜ್ಯದ ಜನರು ಭರ್ಜರಿ ಸಿದ್ದತೆಯಲ್ಲಿ ತೊಡಗಿದ್ದಾರೆ. ಆದರೆ    ಹಬ್ಬದ ಹಿನ್ನೆಲೆ ಹಣ್ಣು, ಹೂವಿನ ದರ ಗಗನಕ್ಕೇರಿದೆ. ಬೆಂಗಳೂರಿನ ಕೆ.ಆರ್.ಮಾರ್ಕೆಟ್ ನಲ್ಲಿ ಹಬ್ಬದ ಹಿನ್ನೆಲೆ ಹೂವು-ಹಣ್ಣು ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಕನಕಾಂಬರ ಕೆಜಿಗೆ 1,200 – 1,500 ರೂಗೆ ಮಾರಾಟವಾಗುತ್ತಿದ್ದರೆ , ಗುಲಾಬಿ 150 – 200 ರೂ, ಮಲ್ಲಿಗೆ ಕೆಜಿಗೆ 600 – 800 ರೂ. ಸೇವಂತಿಗೆ 250 – 300 ರೂ.ತಾವರೆ ಹೂ ಜೋಡಿ 50 – 100 ರೂಗೆ ಮಾರಾಟವಾಗುತ್ತಿದೆ.

ಸೇಬು 200 – 300 ರೂ. ಕಿತ್ತಲೆ 200 ರೂ. ದ್ರಾಕ್ಷಿ 200 ರೂ. ದಾಳಿಂಬೆ-180-200 ರೂವೆರೆಗೆ ಮಾರಾಟವಾಗುತ್ತಿದೆ. ಹಬ್ಬಕ್ಕೆ ಹೂ ಹಾಗೂ ಹಣ್ಣುಗಳ ದರದಲ್ಲಿ ಏರಿಕೆಯಾಗಿರುವುದು ಜನ ಸಾಮಾನ್ಯರು ಹೂ ಹಣ್ಣು ಕೊಂಡೊಯ್ಯಲು ಕೂಡ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...