ಬೆಂಗಳೂರು : ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಶೀಘ್ರದಲ್ಲೇ ಹೊಸ ಮಾದರಿಯ KSRTC ಬಸ್ ರಸ್ತೆಗಿಳಿಯಲಿದೆ.
ಶಕ್ತಿ ಯೋಜನೆ ಬಳಿಕ ಸಾರಿಗೆ ಇಲಾಖೆಯಿಂದ ಹೊಸ ವಿನ್ಯಾಸದ ಮೂಲಕ ವಿನೂತನ ಮಾದರಿಯ KSRTC ಬಸ್ ರಸ್ತೆಗಿಳಿಯಲಿವೆ. ರಾಜಹಂಸ ಮಾದರಿಯ ವ್ಯವಸ್ಥೆ ಇನ್ಮುಂದೆ ಸಾಮಾನ್ಯ ಸಾರಿಗೆಯಲ್ಲೂ ಸಿಗಲಿದೆ. ಶೀಘ್ರದಲ್ಲೇ ಹೊಸ ಮಾದರಿಯ KSRTC ಬಸ್ ರಸ್ತೆಗಿಳಿಯಲಿದೆ ಎಂದು ಹೇಳಲಾಗಿದೆ.
ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿನೂತನ ಮಾದರಿಯ ಬಸ್ ಪರಿಶೀಲನೆ ಮಾಡಿದರು. ಕೆಂಪು ಬಸ್ಸಿನಲ್ಲಿ ಇನ್ಮುಂದೆ ರಾಜಹಂಸ ಬಸ್ ಮಾದರಿಯ ಸೇವೆ ಪ್ರಯಾಣಿಕರಿಗೆ ಸಿಗಲಿದೆ, ಒಂದೂವರೆ ತಿಂಗಳಲ್ಲಿ ವಿನೂತನ ಮಾದರಿಯ 300 ಬಸ್ ರಸ್ತೆಗೆ ಇಳಿಯಲಿದೆ. ಹೊಸ ಮಾದರಿಯ ಬಸ್ ಬೆಂಗಳೂರು ಟು ಧರ್ಮಸ್ಥಳ ನಡುವೆ ಸಂಚರಿಸಲಿವೆ ಎಂದು ಹೇಳಲಾಗಿದೆ.