alex Certify ʼಸಿಲಿಕಾನ್‌ ಸಿಟಿʼ ಮುಡಿಗೆ ಮತ್ತೊಂದು ಗರಿ; ಸ್ಟಾರ್ಟಪ್ ಗಳ ‘ಟಾಪ್ 20’ ಪಟ್ಟಿಯಲ್ಲಿ ಬೆಂಗಳೂರು ಮೂಲದ 10 ಕಂಪನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸಿಲಿಕಾನ್‌ ಸಿಟಿʼ ಮುಡಿಗೆ ಮತ್ತೊಂದು ಗರಿ; ಸ್ಟಾರ್ಟಪ್ ಗಳ ‘ಟಾಪ್ 20’ ಪಟ್ಟಿಯಲ್ಲಿ ಬೆಂಗಳೂರು ಮೂಲದ 10 ಕಂಪನಿ…!

ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ಹೊಂದಿರುವ ರಾಜ್ಯ ರಾಜಧಾನಿ ಬೆಂಗಳೂರಿನ ಮುಡಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಲಿಂಕ್ಡ್ ಇನ್ ಪ್ರಕಟಿಸಿರುವ ‘ಟಾಪ್ 20 ಸ್ಟಾರ್ಟಪ್’ ಗಳ ಪಟ್ಟಿಯಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ 10 ಕಂಪನಿಗಳು ಸ್ಥಾನ ಪಡೆದಿದ್ದು, ‘ಸ್ಟಾರ್ಟಪ್ ಗಳ ನಗರ’ ಎಂಬ ತನ್ನ ಖ್ಯಾತಿಯನ್ನು ಉಳಿಸಿಕೊಂಡಿದೆ.

ಟಾಪ್ 20 ಸ್ಟಾರ್ಟಪ್ ಗಳ ಪಟ್ಟಿ ಇಂತಿದೆ.

1. ZEPTO
2. BluSmart
3. Ditto Insurance
4. Pocket FM
5. Skyroot Aerospace
6. GoKwik
7. Fi
8. Sprinto
9. Supersourcing
10. GrowthSchool
11. Jar
12. Shyft
13. Teachnook
14. StockGro
15. Exponent Energy
16. Housr
17. AccioJob
18. TravClan
19. DotPe
20. Fasal

ಇನ್ನು ಲಿಂಕ್ಡ್ ಇನ್ ಕೆಳಗಿನ ವಿಧಾನಗಳನ್ನು ಅನುಸರಿಸಿ ಈ ಪಟ್ಟಿಯನ್ನು ತಯಾರಿಸಿದೆ.

ಲಿಂಕ್ಡ್ ಇನ್ ಟಾಪ್ ಸ್ಟಾರ್ಟಪ್ ಗಳ ಪಟ್ಟಿ ವಿಧಾನ

ಲಿಂಕ್ಡ್ ಇನ್ ಸ್ಟಾರ್ಟಪ್ ಗಳನ್ನು ನಾಲ್ಕು ಸ್ತಂಭಗಳ ಆಧಾರದಲ್ಲಿ ಅವಲೋಕನ ಮಾಡುತ್ತದೆ: ಅವುಗಳೆಂದರೆ, ಉದ್ಯೋಗ ಪ್ರಗತಿ, ತೊಡಗಿಕೊಳ್ಳುವುದು, ಉದ್ಯೋಗ ಆಸಕ್ತಿ ಮತ್ತು ಅತ್ಯುತ್ಕೃಷ್ಟ ಪ್ರತಿಭೆಗಳ ಆಕರ್ಷಣೆ. ವಿಧಾನದ ನಿಗದಿತ ಸಮಯದಲ್ಲಿ ಉದ್ಯೋಗಿಗಳ ಹೆಚ್ಚಳದ ಶೇಕಡಾವಾರನ್ನು ಪರಿಗಣನೆ ಮಾಡುವ ಮೂಲಕ ಉದ್ಯೋಗ ಪ್ರಗತಿಯನ್ನು ಮಾಪನ ಮಾಡಲಾಗುತ್ತದೆ.

ಈ ಹೆಚ್ಚಳ ಕನಿಷ್ಠ ಶೇ.10 ರಷ್ಟು ಇರಬೇಕು. ಕಂಪನಿಯ ತೊಡಗಿಕೊಳ್ಳುವಿಕೆಯನ್ನು ವಿಭಿನ್ನ ರೀತಿಯಲ್ಲಿ ಅವಲೋಕನ ಮಾಡಲಾಗುತ್ತದೆ. ಅಂದರೆ, ಲಿಂಕ್ಡ್ ಇನ್ ಪೇಜ್ ನ ಉದ್ಯೋಗಿಯಲ್ಲದವರ ವೀಕ್ಷಣೆಗಳು ಮತ್ತು ಅನುಸರಣೆಗಳನ್ನು ಅವಲೋಕಿಸಲಾಗುತ್ತದೆ. ಅದೇ ರೀತಿ, ಎಷ್ಟು ಮಂದಿ ಉದ್ಯೋಗಿಗಳಲ್ಲದವರು ಪ್ರಾರಂಭಿಕ ಉದ್ಯೋಗಿಗಳನ್ನು ವೀಕ್ಷಿಸುತ್ತಿದ್ದಾರೆ ಎಂಬುದರ ಅವಲೋಕನ ನಡೆಯುತ್ತದೆ.

ಇದರಲ್ಲಿ ಹಣ ಪಾವತಿಸಿದ ಮತ್ತು ಪಾವತಿಸದೇ ಇರುವ ಪೋಸ್ಟಿಂಗ್ ಗಳು ಸೇರಿದಂತೆ ಕಂಪನಿಯಲ್ಲಿನ ಉದ್ಯೋಗಗಳನ್ನು ಎಷ್ಟು ಜನರು ಗಮನಿಸುತ್ತಿದ್ದಾರೆ ಮತ್ತು ಎಷ್ಟು ಜನರು ಆ ಕಂಪನಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದರ ಪ್ರಮಾಣವನ್ನು ಗಮನಿಸಲಾಗುತ್ತದೆ. ಉನ್ನತ ಪ್ರತಿಭೆಗಳ ಆಕರ್ಷಣೆಯು ಸ್ಟಾರ್ಟಪ್ ನ ಒಟ್ಟು ಉದ್ಯೋಗಿಗಳ ಶೇಕಡಾವಾರು ಪ್ರಮಾಣದಲ್ಲಿ ಯಾವುದೇ ಜಾಗತಿಕ ಲಿಂಕ್ಡ್ ಇನ್ ಟಾಪ್ ಕಂಪನಿಯಿಂದ ಎಷ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ ಎಂಬುದನ್ನು ಮಾಪನ ಮಾಡಲಾಗುತ್ತದೆ.

ಎಲ್ಲಾ ಅರ್ಹ ಸ್ಟಾರ್ಟಪ್ ಗಳಲ್ಲಿ ಡೇಟಾವನ್ನು ಕ್ರೋಢೀಕರಿಸಲಾಗಿದೆ. ಜುಲೈ 1, 2022 ರಿಂದ ಜೂನ್ 30, 2023 ರವರೆಗಿನ ಕಂಪನಿಗಳ ಕಾರ್ಯಸಾಧನೆಗಳ ಡೇಟಾಗಳನ್ನು ಸಂಗ್ರಹಿಸಲಾಗಿತ್ತು. ಈ ಟಾಪ್ ಪಟ್ಟಿಯಲ್ಲಿ ಅರ್ಹತೆ ಪಡೆಯಲು ಕಂಪನಿಗಳು ಸ್ವತಂತ್ರವಾಗಿರಬೇಕು ಮತ್ತು ಖಾಸಗಿ ಕಂಪನಿಗಳಾಗಿರಬೇಕು. 50 ಕ್ಕಿಂತ ಹೆಚ್ಚು ಸ್ವದೇಶಿ ಉದ್ಯೋಗಿಗಳನ್ನು ಹೊಂದಿರಬೇಕು, ಈ ಉದ್ಯೋಗಿಗಳ ಅನುಭವ 5 ಅಥವಾ ಅದಕ್ಕಿಂತ ಕಡಿಮೆ ವರ್ಷಗಳದ್ದಾಗಿರಬೇಕು ಹಾಗೂ ಭಾರತದಲ್ಲಿಯೇ ಕೇಂದ್ರ ಕಚೇರಿಯನ್ನು ಹೊಂದಿರಬೇಕು ಎಂಬ ನಿಬಂಧನೆಗಳಿದ್ದವು.

ಈ ಪಟ್ಟಿಯಿಂದ ಸಿಬ್ಬಂದಿ ನೇಮಕ ಸಂಸ್ಥೆಗಳು, ಥಿಂಕ್ ಟ್ಯಾಂಕ್ ಗಳು, ಬಂಡವಾಳ ಸಹಭಾಗಿತ್ವದ ಸಂಸ್ಥೆಗಳು, ಮ್ಯಾನೇಜ್ಮೆಂಟ್ ಮತ್ತು ಐಟಿ ಸಲಹಾ ಸಂಸ್ಥೆಗಳು, ಲಾಭರಹಿತ ಮತ್ತು ಜನೋಪಕಾರಿ ಸಂಸ್ಥೆಗಳು, ವೇಗವರ್ಧಕ ಸಂಸ್ಥೆಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಹೊರಗಿಡಲಾಗುತ್ತದೆ. ಇದಲ್ಲದೇ, ಈ ಪಟ್ಟಿಗೆ ಆಯ್ಕೆ ಮಾಡುವ ವೇಳೆಯಲ್ಲಿ ಶೇ.20 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಿದ ಸ್ಟಾರ್ಟಪ್ ಗಳನ್ನು ಅನರ್ಹಗೊಳಿಸಲಾಗುತ್ತದೆ. ಲಿಂಕ್ಡ್ ಇನ್ ಅಥವಾ ಮೈಕ್ರೋಸಾಫ್ಟ್, ಲಿಂಕ್ಡ್ ಇನ್ ಮಾತೃ ಕಂಪನಿ, ಮೈನಾರಿಟಿ ವೆಂಚರ್ ಇನ್ವೆಸ್ಟ್ ಮೆಂಟ್ ಗಳು ಕಂಪನಿಯ ಅರ್ಹತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...