alex Certify SHOCKING NEWS: ಶೀಘ್ರದಲ್ಲೇ ಬರಲಿದೆ ಮತ್ತೊಂದು ಕೊರೊನಾ ವೈರಸ್..​..? ಎಚ್ಚರಿಕೆ ನೀಡಿದ ಚೀನಾದ ʼಬ್ಯಾಟ್​ ವುಮನ್ʼ​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಶೀಘ್ರದಲ್ಲೇ ಬರಲಿದೆ ಮತ್ತೊಂದು ಕೊರೊನಾ ವೈರಸ್..​..? ಎಚ್ಚರಿಕೆ ನೀಡಿದ ಚೀನಾದ ʼಬ್ಯಾಟ್​ ವುಮನ್ʼ​​

ಪ್ರಾಣಿಗಳಿಂದ ಉತ್ಪತ್ತಿಯಾಗಬಲ್ಲ ವೈರಸ್​ಗಳ ಬಗ್ಗೆ ನಡೆಸಿದ ವ್ಯಾಪಕ ಸಂಶೋಧನೆಯಿಂದಾಗಿ ಬ್ಯಾಟ್​ ವುಮನ್​ ಎಂಬ ಖ್ಯಾತಿಯನ್ನು ಗಳಿಸಿರುವ ಚೀನಾದ ವೈರಾಲಜಿಸ್ಟ್​ ಶಿ ಝೆಂಗ್ಲಿ ಇದೀಗ ಮತ್ತೊಂದು ಆಘಾತಕಾರಿ ಎಚ್ಚರಿಕೆ ನೀಡಿದ್ದಾರೆ. ತಮ್ಮ ಇತ್ತೀಚಿನ ಲೇಖನದಲ್ಲಿ ಭವಿಷ್ಯದಲ್ಲಿ ಮತ್ತೊಂದು  ಕೊರೊನಾ ವೈರಸ್​ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಶಿ ಹೇಳಿದ್ದಾರೆ.

ವುಹಾನ್​ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿಯ ಶಿ ಹಾಗೂ ಅವರ ತಂಡವು 40 ವಿವಿಧ ಕೊರೊನಾ ವೈರಸ್​​ ಪ್ರಭೇಧಗಳ ಮೌಲ್ಯಮಾಪನವನ್ನು ನಡೆಸಿದೆ. ಇದು ಮಾನವರ ಮೇಲೆ ಹರಡಲಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಈ 40 ಪ್ರಭೇದಗಳಲ್ಲಿ ಅರ್ಧಕ್ಕೆ ಅರ್ಧದಷ್ಟು ಅತ್ಯಂತ ಅಪಾಯಕಾರಿ ಎಂದು ತಿಳಿಸಲಾಗಿದೆ.

ಭವಿಷ್ಯದ ಸೋಂಕುಗಳ ಬಗ್ಗೆ ನಡೆಸಲಾದ ಅಧ್ಯಯನದಲ್ಲಿ ಭವಿಷ್ಯದಲ್ಲಿ ಅಪಾಯಕಾರಿ ಕೊರನಾ ವೈರಸ್​ ಸಂಬಂಧಿ ಕಾಯಿಲೆಗಳು ಹುಟ್ಟಿಕೊಳ್ಳಲಿದೆ ಎಂದು ಸಂಶೋಧನೆಯು ತಿಳಿಸಿದೆ.

ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಸಂಭಾವ್ಯ ಲ್ಯಾಬ್ ಸೋರಿಕೆಯಿಂದ COVID-19 ಹುಟ್ಟಿಕೊಂಡಿದೆ ಎಂಬ ಅಮೆರಿಕದ ಕೆಲ ರಾಜಕಾರಣಿಗಳ ಬಲವಾದ ಆರೋಪದ ಬಳಿಕ ಶಿ ಝೆಂಗ್ಲಿ ಕೆಲವು ವಿವಾದದಲ್ಲಿ ಸಿಲುಕಿದ್ದರು. ಆದರೆ ಲ್ಯಾಬ್​​ನಲ್ಲಿ ನಿಜವಾಗಿಯೂ ವೈರಸ್​ ಸೋರಿಕೆಯಾಯ್ತೇ ಎನ್ನುವುದು ಇಂದಿಗೂ ಅನುಮಾನಾಸ್ಪದವಾಗಿಯೇ ಉಳಿದಿದೆ. ಅನೇಕ ವಿಜ್ಞಾನಿಗಳು ಬಾವಲಿಗಳಿಂದ ಈ ಸೋಂಕು ಹುಟ್ಟಿಕೊಂಡಿರಬಹುದು ಎಂದು ಅಂದಾಜಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...