alex Certify ಅಂಕಿತಾ ಭಂಡಾರಿ ಅಂತ್ಯ ಸಂಸ್ಕಾರಕ್ಕೆ ನಿರಾಕರಿಸಿದ ಕುಟುಂಬ, ಮೊದಲು ಮರಣೋತ್ತರ ಪರೀಕ್ಷೆ ವರದಿಗೆ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಕಿತಾ ಭಂಡಾರಿ ಅಂತ್ಯ ಸಂಸ್ಕಾರಕ್ಕೆ ನಿರಾಕರಿಸಿದ ಕುಟುಂಬ, ಮೊದಲು ಮರಣೋತ್ತರ ಪರೀಕ್ಷೆ ವರದಿಗೆ ಆಗ್ರಹ

ಪೌರಿ(ಉತ್ತರಾಖಂಡ): ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ರಣೋತ್ತರ ಪರೀಕ್ಷೆಯ ವರದಿ ಹಸ್ತಾಂತರಿಸುವಂತೆ ಒತ್ತಾಯಿಸಿದ ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸಲು ನಿರಾಕರಿಸಿದೆ.

ಜಿಲ್ಲಾಡಳಿತ ಅಂಕಿತಾ ಅವರ ಕುಟುಂಬದವರ ಮನವೊಲಿಸಲು ಪ್ರಯತ್ನಿಸಿದೆ. ಮಗಳ ಮರಣೋತ್ತರ ಪರೀಕ್ಷೆ ವರದಿ ನೀಡುವವರೆಗೆ ನಾವು ಅವಳ ಅಂತಿಮ ವಿಧಿಗಳನ್ನು ನಡೆಸುವುದಿಲ್ಲ. ನಾವು ಆಕೆಯ ತಾತ್ಕಾಲಿಕ ವರದಿಯಲ್ಲಿ ಅವಳನ್ನು ಹೊಡೆದು ನದಿಗೆ ಎಸೆಯಲಾಗಿದೆ ಎಂದು ನೋಡಿದ್ದೇವೆ. ಆದರೆ ನಾವು ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಂಕಿತಾ ಭಂಡಾರಿಯವರ ಸಹೋದರ ಅಜಯ್ ಸಿಂಗ್ ಭಂಡಾರಿ ಹೇಳಿದ್ದಾರೆ.

ಆಕೆಯ ವಾಟ್ಸಾಪ್ ಚಾಟ್‌ ಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಭಾನುವಾರ ತಿಳಿಸಿದೆ. ಪೊಲೀಸ್ ಮೂಲಗಳ ಪ್ರಕಾರ, ಈ ಚಾಟ್‌ ನಲ್ಲಿ, ಅತಿಥಿಗಳಿಗೆ ‘ಹೆಚ್ಚುವರಿ ಸೇವೆ’ ನೀಡುವಂತೆ ರೆಸಾರ್ಟ್‌ನ ಮಾಲೀಕರು ಒತ್ತಡ ಹೇರುತ್ತಿದ್ದಾರೆ. ಅತಿಥಿಗೆ ‘ಹೆಚ್ಚುವರಿ ಸೇವೆ’ ನೀಡಿದರೆ 10,000 ರೂ.ಗೆ ಸಿಗುತ್ತದೆ ಎಂದು ಹೇಳಲಾಗುತ್ತಿದೆ ಎಂದು ಅಂಕಿತಾ ತನ್ನ ಸ್ನೇಹಿತನಿಗೆ ತಿಳಿಸಿದ್ದಾಳೆ.

ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ಎಸ್‌ಐಟಿ ಉಸ್ತುವಾರಿ ಡಿಐಜಿ ಪಿ.ಆರ್. ದೇವಿ ಅವರು, ಅಂಕಿತಾ ಅವರ ವಾಟ್ಸಾಪ್ ಚಾಟ್‌ಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪೌರಿ ಗಡವಾಲ್ ಜಿಲ್ಲೆಯ ಭೋಗ್ ಪುರದ ರೆಸಾರ್ಟ್ ಗೆ ಭೇಟಿ ನೀಡಿದ್ದ ಅತಿಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಕ್ಕೆ ರೆಸಾರ್ಟ್ ಸ್ವಾಗತಕಾರಿಣಿ ಅಂಕಿತಾ ಭಂಡಾರಿಯನ್ನು ಕೊಲೆ ಮಾಡಲಾಗಿದ್ದು, ಆರೋಪಿ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ಮ್ಯಾನೇಜರ್ ಸೌರಭ್, ಉದ್ಯೋಗಿ ಅಂಕಿತ್ ಗುಪ್ತಾ ಅವರನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...