![](https://kannadadunia.com/wp-content/uploads/2021/12/WhatsApp-Image-2021-12-14-at-6.05.38-PM.jpeg)
ಅರ್ಮಾನ್ ಜೈನ್ ನಟಿ ಕರೀನಾ ಕಪೂರ್ ಖಾನ್ರ ಸೋದರ ಸಂಬಂಧಿಯಾಗಿದ್ದಾರೆ. ಹಾಗೂ ಜೈ ಅನ್ಮೋಲ್ರ ಉತ್ತಮ ಸ್ನೇಹಿತ ಸಹ ಹೌದು. ಅನ್ಮೋಲ್ ಜನ್ಮದಿನದಂದು ಈ ಪೋಸ್ಟ್ ಶೇರ್ ಮಾಡಿರುವ ಅರ್ಮಾನ್ , ಅನ್ಮೋಲ್ ಹಾಗೂ ಕ್ರಿಷಾರಿಗೆ ಶುಭಾಶಯಗಳು ಎಂದು ಶೀರ್ಷಿಕೆ ನೀಡಿದ್ದಾರೆ.
ಇತ್ತ ಅನ್ಮೋಲ್ ತಾಯಿ ಟೀನಾ ಅಂಬಾನಿ ಕೂಡ ಸೋಶಿಯಲ್ಮೀಡಿಯಾದಲ್ಲಿ ತಮ್ಮ ಮಗನ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ.
ನೀನು ನಮ್ಮ ಜೀವನಕ್ಕೆ ಹೊಸ ಅರ್ಥವನ್ನು ತಂದಿದ್ದೀಯಾ. ಅತಿಯಾದ ಪ್ರೀತಿಯ ಅರ್ಥವನ್ನು ನಮಗೆ ಕಲಿಸಿದ್ದೀಯಾ. ನಮ್ಮ ಜೀವನವನ್ನು ನೀನು ಪ್ರತಿದಿನ ಬೆಳಗು. ನಿನ್ನನ್ನು ನಾವು ಅತಿಯಾಗಿ ಪ್ರೀತಿಸುತ್ತೇವೆ. ಮುಂಬರುವ ವರ್ಷವೂ ನಿನಗೆ ಉತ್ತಮವಾಗಿರಲಿ. ವೈಯಕ್ತಿಕ ಹಾಗೂ ವೃತ್ತಿಪರ ಜೀವನಗಳೆರಡೂ ಸಂತಸಮಯವಾಗಿ ಇರಲಿ. ನಿನ್ನ ಬಗ್ಗೆ ನಮಗೆ ತುಂಬಾನೇ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.