ಜಂಗಲ್ ಸಫಾರಿಗಳು ಪ್ರವಾಸಿಗರಿಗೆ ಅತಿ ಹೆಚ್ಚು ಖುಷಿ ಕೊಡುವ ಚಟುವಟಿಕೆಗಳಲ್ಲಿ ಒಂದಾಗಿವೆ. ವನ್ಯಜೀವಿಗಳನ್ನು ತಂತಮ್ಮ ಸ್ವಾಭಾವಿಕ ಪರಿಸರದಲ್ಲಿ ಕಂಡು ಆನಂದಿಸುವುದು ಕಣ್ಮನಗಳಿಗೆ ಒಂದು ರೀತಿಯ ಪುಳಕ ನೀಡುವ ಅನುಭವ.
ಆದರೆ ಸಫಾರಿ ವೇಳೆ ಪ್ರಾಣಿಗಳಿಗೆ ತೀರಾ ಸನಿಹಕ್ಕೆ ಬಂದು ಅವುಗಳ ಸಿಟ್ಟಿಗೆ ಕಾರಣವಾದ ಕೆಲವೊಂದು ಸಂದರ್ಭಗಳಲ್ಲಿ ಅನಾಹುತಗಳಾಗುವ ಸಾಧ್ಯತೆಗಳಿರುತ್ತವೆ.
ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿಗೆ ಹೊರಟಿದ್ದ ಪ್ರವಾಸಿಗರಿದ್ದ ವಾಹನವೊಂದನ್ನು ಘೇಂಡಾಮೃಗವೊಂದು ಕೋಪದಿಂದ ಅಟ್ಟಿಸಿಕೊಂಡು ಬರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಅನಸ್ತೇಸಿಯಾ ಚಾಪ್ಮನ್ ಹೆಸರಿನ ಪ್ರವಾಸಿಗರೊಬ್ಬರು ಈ ವಿಡಿಯೋ ಕ್ಲಿಪ್ ಶೇರ್ ಮಾಡಿದ್ದಾರೆ. “ಘೇಂಡಾಮೃಗವು ತನ್ನ ಪೂರ್ಣ ವೇಗದಲ್ಲಿ ನಮ್ಮನ್ನು ಒಂದು ಕಿಮೀವರೆಗೂ ಅಟ್ಟಿಸಿಕೊಂಡು ಬಂದಿದೆ. 3-4 ನಿಮಿಷಗಳ ಕಾಲ ನಮ್ಮತ್ತ ಓಡಿಬಂದಿದೆ. ತೀರಾ ಮಣ್ಣುಮಯ ರಸ್ತೆಯ ಮೇಲೆಯೇ ನಮ್ಮ ಚಾಲಕ ತನ್ನ ಕೈಲಾದಷ್ಟು ವೇಗದಲ್ಲಿ ವಾಹನ ಚಾಲನೆ ಮಾಡಿ ನಮ್ಮನ್ನು ಪಾರು ಮಾಡಿದ್ದಾನೆ. ತಾನು ಸಫಾರಿಯಲ್ಲಿ ಇದುವರೆಗೂ ಕಂಡ ಅತ್ಯಂತ ಅಪಾಯಕಾರಿ ಸನ್ನಿವೇಶಗಳಲ್ಲಿ ಇದೂ ಒಂದು ಎಂದು ಚಾಲಕ ನಮಗೆ ತಿಳಿಸಿದ್ದಾನೆ,” ಎಂದು ಕ್ಯಾಪ್ಷನ್‌ನಲ್ಲಿ ತಿಳಿಸಲಾಗಿದೆ.
https://youtu.be/Y_3UYNzOWpM