alex Certify ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಆನೆ; ಬೆಚ್ಚಿಬೀಳಿಸುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಆನೆ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಸಫಾರಿ ವಾಹನದ ಮೇಲೆ ಆನೆಯೊಂದು ಅಟ್ಟಿಸಿಕೊಂಡು ಹೋಗುತ್ತಿರುವ ಭಯಾನಕ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಈ ವಿಡಿಯೋ ಕ್ಲಿಪ್​ನಲ್ಲಿ, ಸಫಾರಿ ವಾಹನದ ಚಾಲಕನು ತ್ವರಿತವಾಗಿ ಹಿಮ್ಮೆಟ್ಟಿಸುವುದು ಕಂಡುಬರುತ್ತದೆ. ಇದು ನೋಡುಗರಲ್ಲಿ ಗಾಬರಿ ತರುವುದು ಗ್ಯಾರಂಟಿ.

ಐಎಫ್​ಎಸ್​ ಅಧಿಕಾರಿ ಸಾಕೇತ್​ ಬಡೋಲಾ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ವಿಡಿಯೋವು, ಸಫಾರಿ ಜೀಪ್​ ಮೇಲೆ ಆನೆಯೊಂದು ಉಗ್ರವಾಗಿ ಅಟ್ಟಿಸಿಕೊಂಡು ಬಂದು ದಾಳಿ ಮಾಡಲು ಪ್ರಯತ್ನ ಮಾಡುತ್ತಿರುವುದನ್ನು ತೋರಿಸುತ್ತದೆ.

ಇದು ಸುಲಭದ ಪರಿಸ್ಥಿತಿಯಲ್ಲ. ಆದರೂ, ಅಧಿಕಾರಿಗಳು ಆನೆಯ ಕಿರಿಕಿರಿಯ ಹಿಂದಿನ ಕಾರಣವನ್ನು ತನಿಖೆ ಮಾಡಬೇಕು ಎಂದು ಶೀರ್ಷಿಕೆ ನೀಡಿದ್ದು, ಚಾಲಕನ ಪ್ರಯತ್ನವನ್ನೂ ಶ್ಲಾಘಿಸಿದ್ದಾರೆ.

ಈ ವಿಡಿಯೋ 102ಕೆ ವೀಕ್ಷಣೆ ಗಳಿಸಿದ್ದು, ಸಾವಿರಾರು ಪ್ರತಿಕ್ರಿಯೆ ಬಂದಿದೆ. ಆನೆ ಇಷ್ಟೊಂದು ಹಿಂಸಾತ್ಮಕವಾಗಿ ವರ್ತಿಸಲು ಕಾರಣವೇನು ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಸಫಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಕೆಲವರು ಸಲಹೆ ನೀಡಿದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...