
ಸಫಾರಿ ವಾಹನದ ಮೇಲೆ ಆನೆಯೊಂದು ಅಟ್ಟಿಸಿಕೊಂಡು ಹೋಗುತ್ತಿರುವ ಭಯಾನಕ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಈ ವಿಡಿಯೋ ಕ್ಲಿಪ್ನಲ್ಲಿ, ಸಫಾರಿ ವಾಹನದ ಚಾಲಕನು ತ್ವರಿತವಾಗಿ ಹಿಮ್ಮೆಟ್ಟಿಸುವುದು ಕಂಡುಬರುತ್ತದೆ. ಇದು ನೋಡುಗರಲ್ಲಿ ಗಾಬರಿ ತರುವುದು ಗ್ಯಾರಂಟಿ.
ಐಎಫ್ಎಸ್ ಅಧಿಕಾರಿ ಸಾಕೇತ್ ಬಡೋಲಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋವು, ಸಫಾರಿ ಜೀಪ್ ಮೇಲೆ ಆನೆಯೊಂದು ಉಗ್ರವಾಗಿ ಅಟ್ಟಿಸಿಕೊಂಡು ಬಂದು ದಾಳಿ ಮಾಡಲು ಪ್ರಯತ್ನ ಮಾಡುತ್ತಿರುವುದನ್ನು ತೋರಿಸುತ್ತದೆ.
ಇದು ಸುಲಭದ ಪರಿಸ್ಥಿತಿಯಲ್ಲ. ಆದರೂ, ಅಧಿಕಾರಿಗಳು ಆನೆಯ ಕಿರಿಕಿರಿಯ ಹಿಂದಿನ ಕಾರಣವನ್ನು ತನಿಖೆ ಮಾಡಬೇಕು ಎಂದು ಶೀರ್ಷಿಕೆ ನೀಡಿದ್ದು, ಚಾಲಕನ ಪ್ರಯತ್ನವನ್ನೂ ಶ್ಲಾಘಿಸಿದ್ದಾರೆ.
ಈ ವಿಡಿಯೋ 102ಕೆ ವೀಕ್ಷಣೆ ಗಳಿಸಿದ್ದು, ಸಾವಿರಾರು ಪ್ರತಿಕ್ರಿಯೆ ಬಂದಿದೆ. ಆನೆ ಇಷ್ಟೊಂದು ಹಿಂಸಾತ್ಮಕವಾಗಿ ವರ್ತಿಸಲು ಕಾರಣವೇನು ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಸಫಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಕೆಲವರು ಸಲಹೆ ನೀಡಿದರು.