ಇತ್ತೀಚಿನ ದಿನಗಳಲ್ಲಿ ವಿಚಿತ್ರ ಕಾರಣಗಳಿಂದ ಮದುವೆಗಳು ನಿಂತು ಹೋಗುವುದು ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ’ಇಂಥ ಕಾರಣಕ್ಕೂ’ ಹೀಗೆ ಮದುವೆ ನಿಲ್ಲಬಹುದಾ…? ಎಂದು ಅಚ್ಚರಿಯಾಗುವಂಥ ಘಟನೆಗಳು ವಾಸ್ತವ ಜಗತ್ತಿನಲ್ಲೇ ಆಗುತ್ತಿವೆ.
ಇಂಥದ್ದೇ ನಿದರ್ಶನವೊಂದರಲ್ಲಿ ವರನ ವರ್ತನೆಯಿಂದ ಅಸಮಾಧಾನಗೊಂಡಿರುವುದಾಗಿ ತಿಳಿಸಿದ ವಧು ಅವನನ್ನು ಮದುವೆಯಾಗಲು ನಿರಾಕರಿಸಿದ್ದು, ಮದುವೆ ಮನೆಯಲ್ಲಿ ಗದ್ದಲಕ್ಕೆ ಕಾರಣವಾದ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಜರುಗಿದೆ. ವರಮಾಲಾ ಸಮಾರಂಭದ ವೇಳೆ ವರನು ಹಾರವನ್ನು ಎಸೆದ ಎಂದು ಹೇಳಿ ಆಕ್ರೋಶಗೊಂಡಿದ್ದಾಳೆ ಮದುಮಗಮಳು.
ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ
ಘಟನೆಯ ನಂತರ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ. ಜನರು ವಧುವನ್ನು ಮದುವೆಯಾಗುವಂತೆ ಮನವೊಲಿಸಲು ಪ್ರಯತ್ನಿಸಿದರು, ಆದರೆ ಆಕೆ ತನ್ನ ಮನಸ್ಸನ್ನು ಬದಲಾಯಿಸಲು ನಿರಾಕರಿಸಿದ್ದಾರೆ.
ಉತ್ತರ ಪ್ರದೇಶದ ಔರಿಯಾ ಜಿಲ್ಲೆಯ ಬಿಧುನಾ ಕೊಟ್ವಾಲಿಯ ನವೀನ್ ಬಸ್ತಿಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ವಧುವಿನ ನಿರ್ಧಾರಕ್ಕೆ ಸ್ಥಳದಲ್ಲಿದ್ದ ಜನರು ಶಾಕ್ ಆಗಿದ್ದಾರೆ.
ಘಟನೆ ನಡೆದ ವೇಳೆ ವರನ ಮನೆಯವರು ಊಟ ಮಾಡಲು ಹೋಗಿದ್ದರು. ತಾನು ಹಾರವನ್ನು ಹಾಗೆ ಎಸೆದಿಲ್ಲವೆಂದು ವರ ಆಕಾಶ್ ಸ್ಪಷ್ಟಪಡಿಸಿದ್ದಾರೆ.