
ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಸುಂಕರಾ ಜ್ಞಾನ ಪ್ರಕಾಶ ಹೆಸರಿನ ಈ ವ್ಯಕ್ತಿಯ ಕುಟುಂಬ ಪ್ರೀತಿಯ ಸಾಕುನಾಯಿಯನ್ನು 9 ವರ್ಷಗಳ ಕಾಲ ಸಲಹಿದ್ದಾರೆ. 2016ರಲ್ಲಿ ನಾಯಿ ನಿಧನವಾದ ವೇಳೆ ಕುಟುಂಬಕ್ಕೆ ಭಾರೀ ನೋವಾಗಿದ್ದು, ಅಂದಿನಿಂದ ಪ್ರತಿವರ್ಷ ನಾಯಿಯ ಪುಣ್ಯ ಸ್ಮರಣೆ ಮಾಡಿಕೊಂಡು ಬರುತ್ತಿದ್ದಾರೆ.
ಇದೇ ವೇಳೆ, ನಾಯಿಯ ಪುಣ್ಯ ತಿಥಿಯಂದು ವಿಶೇಷ ಪ್ರಾರ್ಥನೆ ಬಳಿಕ ತಮ್ಮೂರಿನ ಜನರಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನೂ ಮಾಡಿದೆ ಪ್ರಕಾಶ ರಾವ್ ಕುಟುಂಬ.