alex Certify ಹಿಂದೂ ಧರ್ಮ ರಕ್ಷಣೆಗೆ 3,000 ದೇವಾಲಯಗಳ ನಿರ್ಮಾಣಕ್ಕೆ ಬೃಹತ್ ಯೋಜನೆ: ಆಂಧ್ರ ಸರ್ಕಾರದ ಮಹತ್ವದ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂ ಧರ್ಮ ರಕ್ಷಣೆಗೆ 3,000 ದೇವಾಲಯಗಳ ನಿರ್ಮಾಣಕ್ಕೆ ಬೃಹತ್ ಯೋಜನೆ: ಆಂಧ್ರ ಸರ್ಕಾರದ ಮಹತ್ವದ ಘೋಷಣೆ

ಅಮರಾವತಿ: ಆಂಧ್ರಪ್ರದೇಶ ಸರ್ಕಾರ ‘ಹಿಂದೂ ನಂಬಿಕೆ’ಯನ್ನು ರಕ್ಷಿಸುವ ಉದ್ದೇಶದಿಂದ ಸುಮಾರು 3,000 ದೇವಾಲಯಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ.

ಆಂಧ್ರಪ್ರದೇಶದ ಪ್ರತಿ ಹಳ್ಳಿಗೂ ದೇವಸ್ಥಾನ ಇರುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸರ್ಕಾರ, ರಾಜ್ಯದಲ್ಲಿ ದೇವಾಲಯಗಳ ನಿರ್ಮಾಣವನ್ನು ದೊಡ್ಡ ರೀತಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ, ಹಿಂದೂ ಧರ್ಮವನ್ನು ರಕ್ಷಿಸಲು ಮತ್ತು ಪ್ರಚಾರ ಮಾಡಲು ಈ ಯೋಜನೆ ಘೋಷಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಕೊಟ್ಟು ಸತ್ಯನಾರಾಯಣ ಹೇಳಿದರು.

ದೇಗುಲಗಳ ನಿರ್ಮಾಣವನ್ನು ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಹಿಂದೂ ನಂಬಿಕೆಯನ್ನು ಬೃಹತ್ ಪ್ರಮಾಣದಲ್ಲಿ ರಕ್ಷಿಸಲು ಮತ್ತು ಪ್ರಚಾರ ಮಾಡಲು ದುರ್ಬಲ ವರ್ಗಗಳ ಪ್ರದೇಶಗಳಲ್ಲಿ ಹಿಂದೂ ದೇವಾಲಯಗಳ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ ಎಂದು ದತ್ತಿ ಸಚಿವರೂ ಆಗಿರುವ ಸತ್ಯನಾರಾಯಣ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನದ ಶ್ರೀ ವಾಣಿ ಟ್ರಸ್ಟ್ ದೇವಾಲಯಗಳ ನಿರ್ಮಾಣಕ್ಕೆ ತಲಾ 10 ಲಕ್ಷ ರೂ. ನೀಡಲಿದೆ. 1,330 ದೇವಾಲಯಗಳ ನಿರ್ಮಾಣ ಪ್ರಾರಂಭದ ಜೊತೆಗೆ, ಇನ್ನೂ 1,465 ಈ ಪಟ್ಟಿಗೆ ಸೇರಿಸಲಾಗಿದೆ. ಅದೇ ರೀತಿ ಕೆಲವು ಶಾಸಕರ ಮನವಿ ಮೇರೆಗೆ ಇನ್ನೂ 200 ನಿರ್ಮಿಸಲಾಗುವುದು. ಉಳಿದ ದೇವಸ್ಥಾನಗಳ ನಿರ್ಮಾಣವನ್ನು ಇತರೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಮಾಡಲಾಗುವುದು ಎಂದರು.

978 ದೇವಾಲಯಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ

ದತ್ತಿ ಇಲಾಖೆಯ ಅಧೀನದಲ್ಲಿ 978 ದೇವಸ್ಥಾನಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಪ್ರತಿ 25 ದೇವಸ್ಥಾನಗಳ ಕಾಮಗಾರಿಯನ್ನು ಸಹಾಯಕ ಎಂಜಿನಿಯರ್‌ಗೆ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು. ಕೆಲವು ದೇವಾಲಯಗಳನ್ನು ಪುನರುಜ್ಜೀವನಗೊಳಿಸಲು ಮತ್ತು ದೇವಾಲಯಗಳಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲು 270 ಕೋಟಿ ಸಿಜಿಎಫ್ ನಿಧಿಯಲ್ಲಿ 238 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

ಅದೇ ರೀತಿ, ಪ್ರತಿ ದೇವಸ್ಥಾನಕ್ಕೆ 5,000 ರೂ.ನಂತೆ ಧಾರ್ಮಿಕ ಕ್ರಿಯೆಗಳಿಗೆ(ದೂಪ ದೀಪ ನೈವೇದ್ಯಂ) ಹಣಕಾಸು ನೀಡಲು ಈ ಹಣಕಾಸು ವರ್ಷದಲ್ಲಿ ಮೀಸಲಿಟ್ಟ 28 ಕೋಟಿ ರೂ.ಗಳಲ್ಲಿ 15 ಕೋಟಿ ರೂ. ನೀಡಲಾಗಿದೆ. 2019 ರ ವೇಳೆಗೆ ಕೇವಲ 1,561 ದೇವಾಲಯಗಳನ್ನು ನೋಂದಾಯಿಸಲಾಗಿದ್ದು, ಈಗ 5,000 ಕ್ಕೆ ವಿಸ್ತರಿಸಿದೆ ಎಂದು ಸತ್ಯನಾರಾಯಣ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...