ತನ್ನ ಮಾಜಿ ಚಾಲಕನನ್ನು ಹತ್ಯೆಗೈದ ಆರೋಪದಲ್ಲಿ ಆಂಧ್ರಪ್ರದೇಶದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ವಿಧಾನಪರಿಷತ್ ಸದಸ್ಯ ಅನಂತ ಸತ್ಯ ಉದಯ ಭಾಸ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನೆಲ್ಲಾ ಗೌಪ್ಯ ಚಟುವಟಿಕೆಗಳನ್ನು ಬಹಿರಂಗಪಡಿಸುತ್ತಾನೆ ಎಂಬ ಭೀತಿಯಿಂದ ಅನಂತ ಸತ್ಯ ಉದಯ ಭಾಸ್ಕರ್ ತನ್ನ ಮಾಜಿ ಚಾಲಕ ಸುಬ್ರಮಣ್ಯಂನನ್ನು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೇ 19 ರಂದು ರಾತ್ರಿ 9.30 ಕ್ಕೆ ಸುಬ್ರಮಣ್ಯಂಗೆ ಕರೆ ಮಾಡಿ ಮಾತನಾಡುವುದಿದೆ ಸ್ವಲ್ಪ ಹೊತ್ತು ಬಂದು ಹೋಗು ಎಂದು ಭಾಸ್ಕರ್ ಸೂಚಿಸಿದ್ದಾರೆ. ಇದರಂತೆ ಭಾಸ್ಕರ್ ಬಳಿ ಹೋದ ಸುಬ್ರಮಣ್ಯಂ ಮತ್ತೆ ಬಂದದ್ದು ಹೆಣವಾಗಿ.
ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಸುಬ್ರಮಣ್ಯಂನ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಭಾಸ್ಕರ್ ಹಸ್ತಾಂತರಿಸಿ, ಅಪಘಾತದಿಂದ ಈ ಸಾವು ಸಂಭವಿಸಿದೆ ಎಂದು ಕತೆ ಕಟ್ಟಿದ್ದಾನೆ.
Shocking: ನವಜಾತ ಶಿಶುವಿನ ಶವ ಕಚ್ಚಿ ತಿನ್ನಲು ಯತ್ನಿಸಿದ ನಾಯಿಗಳು..!
ಇದರಿಂದ ಅನುಮಾನಗೊಂಡ ಸುಬ್ರಮಣ್ಯಂ ತಾಯಿ ಮೇ 20 ರಂದು ಪೊಲೀಸರಿಗೆ ದೂರು ನೀಡಿ, ನನ್ನ ಮಗ ಅಪಘಾತದಿಂದ ಸಾವನ್ನಪ್ಪಿಲ್ಲ. ಅವನನ್ನು ಕೊಲೆ ಮಾಡಲಾಗಿದೆ ಎಂದು ದೂರಿದ್ದಾರೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರಿಗೆ ಘಟನೆಯ ನೈಜ ಚಿತ್ರಣ ಬಹಿರಂಗಗೊಂಡಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಸುಬ್ರಮಣ್ಯಂ ಅಪಘಾತದಿಂದ ಸಾವನ್ನಪ್ಪಿಲ್ಲ, ಬದಲಿಗೆ ಬಲವಾದ ಹಲ್ಲೆಯಿಂದ ಸಾವನ್ನಪ್ಪಿದ್ದಾನೆ ಎಂದು ದೃಢಪಟ್ಟಿದೆ. ಅಲ್ಲದೇ ಈ ಹಿನ್ನೆಲೆಯಲ್ಲಿ ಭಾಸ್ಕರ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಭಾಸ್ಕರ್ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ.
ಸುಬ್ರಮಣ್ಯಂನನ್ನು ಮೇ 19 ರಂದು ರಾತ್ರಿ ಕರೆಯಿಸಿಕೊಂಡು ಶಂಕರ ನಗರ ಸೆಲ್ ಟವರ್ ಪ್ರದೇಶದಲ್ಲಿ ಆತನ ಮೇಲೆ ಹಲ್ಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಹಿಂದೆ ನನ್ನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸುಬ್ರಮಣ್ಯಂ ನನ್ನೆಲ್ಲಾ ಗುಪ್ತ ಚಟುವಟಿಕೆಗಳ ಬಗ್ಗೆ ತಿಳಿದಿದ್ದ. ಇತ್ತೀಚೆಗೆ ಕೆಲಸ ಬಿಟ್ಟಿದ್ದ ಆತ ನನ್ನ ಚಟುವಟಿಕೆಗಳ ಬಗ್ಗೆ ಬಹಿರಂಗಪಡಿಸುತ್ತಾನೆ ಎಂಬ ಭೀತಿಯಿಂದ ಈ ಕೃತ್ಯ ನಡೆಸಿದ್ದಾಗಿ ಹೇಳಿಕೊಂಡಿದ್ದಾನೆ.
ಸುಬ್ರಮಣ್ಯಂನ ಗುಪ್ತಾಂಗಕ್ಕೆ ಬಲವಾಗಿ ಹಲ್ಲೆ ನಡೆಸಿದ್ದಾನೆ. ಇದನ್ನು ಗಮನಿಸಿದ ಭಾಸ್ಕರ್ ಆತನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದ್ದಾನಾದರೂ ಅಷ್ಟರ ವೇಳೆಗೆ ಸುಬ್ರಮಣ್ಯಂನ ಪ್ರಾಣಪಕ್ಷಿ ಹಾರಿಹೋಗಿತ್ತು.
ಇದರಿಂದ ಭೀತಿಗೊಳಗಾಗಿದ್ದ ಭಾಸ್ಕರ್, ಚಲಿಸುವ ಕಾರಿನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಕತೆ ಕಟ್ಟಲು ಪ್ರಯತ್ನಿಸಿದನಾದರೂ ಪೊಲೀಸರ ತನಿಖೆಯಿಂದ ಸತ್ಯಾಂಶವನ್ನು ಬಾಯಿ ಬಿಡಬೇಕಾಯಿತು.