ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕಿದ ಏಕೈಕ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ ಈಗ ಎಲ್ಲೆಲ್ಲೂ ಸಂಚಲನ ಸೃಷ್ಟಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ನೀರಜ್‌ರದ್ದೇ ಮಾತು ಎಂಬಂತಾಗಿದೆ.
ಬಾಹುಬಲಿ ಚಿತ್ರದಲ್ಲಿ ನಾಯಕ ಪ್ರಭಾಸ್ ಯುದ್ಧದ ಸೀನ್ ಒಂದರಲ್ಲಿ ಭರ್ಜಿ ಹಿಡಿದು ಕುದುರೆಯೇರಿ ಹೋಗುತ್ತಿರುವ ದೃಶ್ಯವೊಂದರ ಜೊತೆಗೆ ಜಾವೆಲಿನ್ ಎಸೆಯುತ್ತಿರುವ ಫೋಟೋವನ್ನು ಬೆಸೆದು ಮಾಡಲಾದ ಮೀಮ್ ಒಂದನ್ನು ಉದ್ಯಮಿ ಆನಂದ್ ಮಹಿಂದ್ರಾ ಶೇರ್ ಮಾಡಿಕೊಂಡಿದ್ದಾರೆ.
ʼವಾಟ್ಸಾಪ್ʼನಲ್ಲಿ ಕೋವಿಡ್ ಪ್ರಮಾಣಪತ್ರ ಪಡೆಯಲು ಹೀಗೆ ಮಾಡಿ
“ನಾವೆಲ್ಲಾ ನಿಮ್ಮ ಸೇನೆಯಲ್ಲಿದ್ದೇವೆ, ಬಾಹುಬಲಿ” ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ ಆನಂದ್.