alex Certify ಬದಲಾದ ಜೀವನ: ಆನಂದ್​ ಮಹೀಂದ್ರಾ ಶೇರ್​ ಮಾಡಿದ ವಿಡಿಯೋಗೆ ಭಾರಿ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದಲಾದ ಜೀವನ: ಆನಂದ್​ ಮಹೀಂದ್ರಾ ಶೇರ್​ ಮಾಡಿದ ವಿಡಿಯೋಗೆ ಭಾರಿ ಮೆಚ್ಚುಗೆ

ನಾವು ತಂತ್ರಜ್ಞಾನದ ಮೇಲೆ ಅವಲಂಬಿತರಾಗುವುದಕ್ಕಿಂತ ಮುಂಚೆಯೇ, ಏನೇನು ಬಳಕೆ ಮಾಡುತ್ತಿದ್ದೆವು ಎಂಬ ಒಂದು ಮೆಲುಕು ನೋಟವನ್ನು ಮಹೀಂದ್ರಾ ಗ್ರೂಪ್ ಚೇರ್ಮನ್, ಉದ್ಯಮಿ ಆನಂದ್​ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ.

ಸದಾ ಒಂದಿಲ್ಲೊಂದು ಉಲ್ಲಾಸಕರ ವಿಡಿಯೋ ಶೇರ್​ ಮಾಡಿಕೊಂಡು ಜನರಿಗೆ ಅಮೂಲ್ಯ ಮಾಹಿತಿ ನೀಡುತ್ತಿರುವ ಆನಂದ್​ ಮಹೀಂದ್ರಾ ಅವರ ಈ ವಿಡಿಯೋ ಕೂಡ ವೈರಲ್​ ಆಗಿದೆ. ಕ್ಯಾಸೆಟ್‌ಗಳಿಂದ ಹಿಡಿದು ಟೈಪ್ ರೈಟರ್‌ಗಳವರೆಗೆ, 80 ಮತ್ತು 90 ರ ದಶಕದ ಜೀವನದ ಸಾರವನ್ನು ಈ ವಿಡಿಯೋ ಒಳಗೊಂಡಿದೆ.

ನಿಯತಕಾಲಿಕೆ ಮತ್ತು ವೃತ್ತಪತ್ರಿಕೆ ಜಾಹೀರಾತುಗಳನ್ನು ಸಹ ವಿಡಿಯೋ ಒಳಗೊಂಡಿದೆ. ಕ್ಲಿಪ್ ಹಳೆಯ ನೆನಪುಗಳ ನಿಧಿಯಾಗಿದೆ.

ಎಂಥ ಸುಂದರ ಮಧುರ ನೆನಪು. ಮೂರ್ನಾಲ್ಕು ದಶಕಗಳಲ್ಲಿ ಆಗಿರುವ ಈ ಬದಲಾವಣೆ ಯಾರಾದರೂ ಸಂಗ್ರಹಿಸಿ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಿದ್ದರೆ ತುಂಬಾ ಪುರಾತನ ಎನ್ನಿಸಿದರೂ ಅಚ್ಚರಿಯಿಲ್ಲ ಎಂದು ಹಲವರು ಕಮೆಂಟ್​ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...