ನಾವು ತಂತ್ರಜ್ಞಾನದ ಮೇಲೆ ಅವಲಂಬಿತರಾಗುವುದಕ್ಕಿಂತ ಮುಂಚೆಯೇ, ಏನೇನು ಬಳಕೆ ಮಾಡುತ್ತಿದ್ದೆವು ಎಂಬ ಒಂದು ಮೆಲುಕು ನೋಟವನ್ನು ಮಹೀಂದ್ರಾ ಗ್ರೂಪ್ ಚೇರ್ಮನ್, ಉದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ.
ಸದಾ ಒಂದಿಲ್ಲೊಂದು ಉಲ್ಲಾಸಕರ ವಿಡಿಯೋ ಶೇರ್ ಮಾಡಿಕೊಂಡು ಜನರಿಗೆ ಅಮೂಲ್ಯ ಮಾಹಿತಿ ನೀಡುತ್ತಿರುವ ಆನಂದ್ ಮಹೀಂದ್ರಾ ಅವರ ಈ ವಿಡಿಯೋ ಕೂಡ ವೈರಲ್ ಆಗಿದೆ. ಕ್ಯಾಸೆಟ್‌ಗಳಿಂದ ಹಿಡಿದು ಟೈಪ್ ರೈಟರ್‌ಗಳವರೆಗೆ, 80 ಮತ್ತು 90 ರ ದಶಕದ ಜೀವನದ ಸಾರವನ್ನು ಈ ವಿಡಿಯೋ ಒಳಗೊಂಡಿದೆ.
ನಿಯತಕಾಲಿಕೆ ಮತ್ತು ವೃತ್ತಪತ್ರಿಕೆ ಜಾಹೀರಾತುಗಳನ್ನು ಸಹ ವಿಡಿಯೋ ಒಳಗೊಂಡಿದೆ. ಕ್ಲಿಪ್ ಹಳೆಯ ನೆನಪುಗಳ ನಿಧಿಯಾಗಿದೆ.
ಎಂಥ ಸುಂದರ ಮಧುರ ನೆನಪು. ಮೂರ್ನಾಲ್ಕು ದಶಕಗಳಲ್ಲಿ ಆಗಿರುವ ಈ ಬದಲಾವಣೆ ಯಾರಾದರೂ ಸಂಗ್ರಹಿಸಿ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಿದ್ದರೆ ತುಂಬಾ ಪುರಾತನ ಎನ್ನಿಸಿದರೂ ಅಚ್ಚರಿಯಿಲ್ಲ ಎಂದು ಹಲವರು ಕಮೆಂಟ್ ಹಾಕಿದ್ದಾರೆ.