
ನೀಲಕಂದನ್ ನಾಯರ್ ಹೆಸರಿನ 10 ವರ್ಷ ವಯಸ್ಸಿನ ಈ ಬಾಲಕ ಕೇರಳದ ಏಕವೀರ ಕಳರಿಪಯಟ್ಟು ಅಕಾಡೆಮಿಯ ವಿದ್ಯಾರ್ಥಿ.
ಉದ್ದುದ್ದು ಕಡ್ಡಿಗಳನ್ನು ಬಳಸಿ ಲೀಲಾಜಾಲವಾಗಿ ಕಳರಿಪಯಟ್ಟಿನ ಕಸರತ್ತುಗಳನ್ನು ಮಾಡುತ್ತಿರುವ ನೀಲಕಂದನ್‌ಗೆ ಭೇಷ್‌ಗಿರಿ ಹೇಳಿದ ಆನಂದ್, “ನಮ್ಮ ಕ್ರೀಡಾ ಆದ್ಯತೆಗಳ ಪಟ್ಟಿಯಲ್ಲಿ ಕಳರಿಪಯಟ್ಟಿಗೆ ಬಹಳ ಪ್ರಾಮುಖ್ಯತೆ ನೀಡಬೇಕು. ಇದರಿಂದ ಜಗತ್ತಿನ ಗಮನ ಸೆಳೆಯಬಹುದು,” ಎಂದು ಹೇಳಿದ್ದಾರೆ.