ಖ್ಯಾತ ಉದ್ಯಮಿ, ಮಹೀಂದ್ರಾ ಕಂಪನಿಯ ಮಾಲೀಕ ಆನಂದ್ ಮಹೀಂದ್ರಾ ಅವರ ಟ್ವಿಟರ್ ಖಾತೆಯ ತುಂಬ ಬರೀ ಕೌತುಕಗಳೇ…! ಹೌದು, ಅವರು ಜಗತ್ತಿನ ಎಲ್ಲ ವಿಶೇಷಗಳನ್ನು ತಮ್ಮ ಫಾಲೋವರ್ಸ್ಗಳ ಜತೆಗೆ ಹಂಚಿಕೊಳ್ಳುತ್ತಾರೆ.
ಈ ಬಾರಿ ಅವರು ರೋಬಾಟ್ಗಿಂತಲೂ ವೇಗವಾಗಿ ನೂರಾರು ದೋಸೆಗಳನ್ನು ಹಾಕಿ, ಬೆಂದ ಬಳಿಕ ತುಂಡರಿಸಿ ತಟ್ಟೆಗೆ ಹಾಕಿಕೊಂಡು, ಹಂಚಿನ ಮೇಲಿಂದ ಸರ್ರನೇ ತಟ್ಟೆಯನ್ನು ಜಾರಿಸುತ್ತಾ ಜನರ ಬಳಿಗೆ ತಲುಪಿಸುವ ವಿಶಿಷ್ಟ ಶೈಲಿಯ ವ್ಯಾಪಾರಿಯ ವಿಡಿಯೊ ಹಂಚಿಕೊಂಡಿದ್ದಾರೆ. ಕ್ಷಣ ಮಾತ್ರದಲ್ಲಿ ಹಂಚಿನಿಂದ ದೋಸೆಗಳು, ಪ್ಲೇಟ್ಗೆ ಹೋಗಿ ಅಲ್ಲಿಂದ ಗ್ರಾಹಕರ ಬಾಯಿ ಸೇರುತ್ತದೆ.
ಮುನಿಸಿಕೊಂಡ ಸಹೋದರ ಹತ್ತಿರವಾಗ್ಬೇಕೆಂದ್ರೆ ಹೀಗೆ ಮಾಡಿ….!
ಈ ಮನುಷ್ಯನ ಕೈಗಳ, ಮನಸ್ಸಿನ ವೇಗಕ್ಕೆ ಶರಣಾಗಿದ್ದೇನೆ. ವಿಡಿಯೋ ನೋಡಿ-ನೋಡಿ ಸುಸ್ತಾಗಿದೆ. ಹೊಟ್ಟೆ ಕೂಡ ಹಸಿಯುತ್ತಿದೆ ಎಂದು ಆನಂದ್ ಮಹೀಂದ್ರಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಸುಮಾರು ಮೂರು ಲಕ್ಷ ಜನರು ಈ ವಿಡಿಯೋ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.