alex Certify ಇಂಧನ, ಸಮಯ ಉಳಿಸುವ ರೋಡ್​ ಮ್ಯಾಪ್​ ಶೇರ್​ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಧನ, ಸಮಯ ಉಳಿಸುವ ರೋಡ್​ ಮ್ಯಾಪ್​ ಶೇರ್​ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಅವರು ಇದಾಗಲೇ ಕುತೂಹಲಕಾರಿ ಪೋಸ್ಟ್​ಗಳನ್ನು ಮಾಡುವ ಮೂಲಕ ಜನರನ್ನು ಆಕರ್ಷಿತರನ್ನಾಗಿಸುತ್ತಾರೆ. ಇದೀಗ ಅವರು, ಹೆಚ್ಚಿನ ಇಂಧನ ಬಳಕೆ ಮತ್ತು ಪ್ರಯಾಣಿಸಲು ಹೆಚ್ಚಯ ಸಮಯ ವ್ಯಯವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಒಂದು ಪೋಸ್ಟ್​ ಶೇರ್​ ಮಾಡಿದ್ದು, ಅದೀಗ ವೈರಲ್​ ಆಗಿದೆ.

ಅವರು ಡಿಸೈನ್​ ಒಂದನ್ನು ತಯಾರಿಸಿದ್ದು, ಜನರು ಅತಿ ಕಡಿಮೆ ಸಮಯದಲ್ಲಿ ಟ್ರಾಫಿಕ್​ ಫ್ರೀಯಾಗಿ ಹೇಗೆ ಸಂಚರಿಸಬಹುದು ಎಂದು ಹೇಳಿದ್ದಾರೆ. ಈ ಕುರಿತು ಒಂದು ನಕ್ಷೆಯನ್ನು ಅವರು ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್​ಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಈ ವಿಡಿಯೋ ನೋಡಿ ಜನರು ಶ್ಲಾಘನೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಬೆಂಗಳೂರಿನಂಥ ಮಹಾನಗರಗಳಲ್ಲಿ ಇದು ಸ್ವಲ್ಪ ಕಷ್ಟ ಎನ್ನುತ್ತಿದ್ದರೆ, ಹಲವರು ಇದನ್ನು ಜಾರಿ ಮಾಡಿದರೆ ಟ್ರಾಫಿಕ್​ ಕಿರಿಕಿರಿ ತಪ್ಪಿಸಬಹುದು ಎಂದಿದ್ದಾರೆ. ತಮ್ಮ ಮನೆಯಿಂದ ಕಚೇರಿ ತಲುಪಲು ಸಮೀಪ ಮಾರ್ಗವಿದ್ದರೂ ಸುತ್ತಿ ಬಳಸಿ ಬರುವ ಕಾರಣ, ಇಂಧನ ಸಿಕ್ಕಾಪಟ್ಟೆ ಖರ್ಚಾಗುತ್ತದೆ, ಜೊತೆಗೆ ಸಮಯ ಕೂಡ. ಈ ಮಾರ್ಗವನ್ನು ಅನುಸರಿಸಿದರೆ ಖಂಡಿತ ತಮ್ಮಂಥ ಎಷ್ಟೋ ಮಂದಿಗೆ ಉಪಯೋಗ ಆಗಲಿದೆ ಎಂದು ಹಲವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...