alex Certify ಇತಿಹಾಸದ ಮೇಲೆ ಬೆಳಕು ಚೆಲ್ಲುವ 1957 ರ ವಿಡಿಯೋ; ಶೇರ್​ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇತಿಹಾಸದ ಮೇಲೆ ಬೆಳಕು ಚೆಲ್ಲುವ 1957 ರ ವಿಡಿಯೋ; ಶೇರ್​ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ

ನವದೆಹಲಿ: ಪದ್ಮನಾಭ ಗೋಪಿನಾಥ್ ಎಂಬ ಯುವ ವಿದ್ಯಾರ್ಥಿ ಬ್ರಿಟನ್ ಮಹಿಳೆಯೊಬ್ಬರು ಆಯೋಜಿಸಿದ್ದ ಹೈಸ್ಕೂಲ್ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 1957 ರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಇವರು ಈ ವಿಡಿಯೋವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಟ್ಯಾಗ್​ ಮಾಡಿ ಪದ್ಮನಾಭ್​ ಗೋಪಿನಾಥ್ ಅವರು ಎಲ್ಲಿದ್ದಾರೆಂದು ತಿಳಿಯಬೇಕೆಂದು ಕೇಳಿಕೊಂಡಿದ್ದಾರೆ.

ಈ ಹಳೆಯ ವಿಡಿಯೋದಲ್ಲಿ ಪದ್ಮನಾಭ್​ ಗೋಪಿನಾಥ್ ಅವರು ಇತಿಹಾಸದ ಕೆಲವು ತಿರುಚಿದ ಪುಟಗಳ ಬಗ್ಗೆ ಚರ್ಚಾ ಸ್ಪರ್ಧೆಯಲ್ಲಿ ವಿವರಣೆ ನೀಡುತ್ತಿದ್ದರು. ಮ್ಯಾಗ್ನಾ ಕಾರ್ಟಾಕ್ಕೆ ಸಹಿ ಹಾಕಿದ ನಂತರ ಇತಿಹಾಸವು ಪ್ರಾರಂಭವಾಯಿತು ಎಂದು ಭಾವಿಸುವ ಮೂಲಕ ಇಂಗ್ಲಿಷರು ಉದ್ದೇಶಪೂರ್ವಕವಾಗಿ ಅಜ್ಞಾನಿಗಳಾಗಿದ್ದಾರೆ ಎಂದು ಪದ್ಮನಾಭ್​ ಅವರು ಚರ್ಚೆಯಲ್ಲಿ ಹೇಳಿದರು, ಆದರೆ ಇದು 3000 ವರ್ಷಗಳ ಹಿಂದೆ ಆಂಗ್ಲೋ ಸ್ಯಾಕ್ಸನ್ ಬೇಟೆಗಾರರಾಗಿದ್ದಾಗ ಪ್ರಾರಂಭವಾಯಿತು ಎಂದು ಅವರು ತಿಳಿಸುತ್ತಿದ್ದರು.

’57ರ ದಶಕದಲ್ಲಿ ಭಾರತದ ಯಾರೋ ಒಬ್ಬರು ಇಷ್ಟು ಹುರುಪಿನಿಂದ ಚಾಂಪಿಯನ್ ಆಗಿರುವುದನ್ನು ನೋಡಲು ಅದ್ಭುತವಾಗಿದೆ’ ಎಂದು ಆನಂದ್​ ಮಹೀಂದ್ರಾ ಬರೆದಿದ್ದಾರೆ. ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್ ಅವರು, “ನಾನು ಆಗ ಹುಟ್ಟಿದ್ದೆ. ಇವರು ಐಎಲ್​ಒನ ಸ್ಟಾರ್ ಅಧಿಕಾರಿಯಾಗಿ ಈಗ ನಿವೃತ್ತರಾಗಿದ್ದಾರೆ, ಆದರೆ ಎಲ್ಲಿ ಇದ್ದಾರೆ ಎನ್ನುವುದು ತಿಳಿದಿಲ್ಲ“ ಎಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...