
ಏನಾದರೂ ಸಾಧನೆ ಮಾಡಬೇಕೆಂದಾದಲ್ಲಿ ಇನ್ನೊಬ್ಬರ ಮಾತನ್ನು ಕೇಳದೆ ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ನಂಬಿಕೆಯಿದ್ದರೆ ಸಾಕು. ಬೇರೆಯವರ ಮಾತನ್ನು ಕೇಳಬಾರದು ಎಂಬಂತಹ ಸಂದೇಶ ಸಾರುವ ವಿಡಿಯೋವನ್ನು ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರಲ್ಲಿ ನಾಲ್ವರು ಸಾವು
ಪುಟ್ಟ ಬಾಲಕನೋರ್ವ ರಾಕ್ ಕ್ಲೈಂಬಿಂಗ್ ಹತ್ತಲು ಬಹಳ ಪ್ರಯಾಸಪಟ್ಟಾದ್ರೂ ಹತ್ತುತ್ತಿರುವ ವಿಡಿಯೋವನ್ನು ಉದ್ಯಮಿ ಪೋಸ್ಟ್ ಮಾಡಿದ್ದಾರೆ. ಹತ್ತಲು ಕಷ್ಟವಾದ್ರೂ ಪುಟ್ಟ ಬಾಲಕ ಬಹಳ ಕಷ್ಟಪಟ್ಟು, ಅಂತಿಮವಾಗಿ ಯಶಸ್ವಿಯಾಗಿರುವುದು ಹೋರಾಟದ ಮನೋಭಾವವನ್ನು ತೋರಿಸುತ್ತದೆ. ಉನ್ನತ ಸ್ಥಾನವನ್ನು ತಲುಪಲು ನಿಮ್ಮನ್ನು ನಂಬಿ, ಮುಂದುವರಿಯಿರಿ ಎಂಬಂತಹ ಪ್ರೇರಕ ಮಾತುಗಳು ವಿಡಿಯೋದಲ್ಲಿದೆ.
ಶಾಕಿಂಗ್: ಟವೆಲ್ ನೀಡಲು ವಿಳಂಬ ಮಾಡಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ..!
ಈ ವಿಡಿಯೋ ಒಂದೆರಡು ವರ್ಷಗಳ ಹಿಂದಿನದ್ದಾದ್ರೂ, ಇಂದಿಗೂ ಔಟ್ ಡೇಟೆಡ್ ಆಗಿಲ್ಲ ಎಂದು ಉದ್ಯಮಿ ಆನಂದ್ ಮಹೀಂದ್ರಾ ಶೀರ್ಷಿಕೆ ಬರೆದು, ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 85,000ಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.