alex Certify ʼಪಕ್ಷಿ ನೋಟʼ ದ ಸುಂದರ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ; ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಕ್ಷಿ ನೋಟʼ ದ ಸುಂದರ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ; ನೆಟ್ಟಿಗರು ಫಿದಾ

ಬಿಲಿಯನೇರ್ ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾಕಾಲ ಸಕ್ರಿಯರಾಗಿರುತ್ತಾರೆ. ಆಗಾಗ್ಗೆ ಕುತೂಹಲಕಾರಿ ಮತ್ತು ಆಸಕ್ತಿದಾಯಕ ವಿಡಿಯೋಗಳನ್ನ ಮತ್ತು ವಿಚಾರಗಳನ್ನ ಹಂಚಿಕೊಳ್ಳುತ್ತಿರುತ್ತಾರೆ.

9 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಅವರ ಖಾತೆಯಲ್ಲಿನ ಬಹುತೇಕ ಪೋಸ್ಟ್ ಜನರಿಗೆ ಸ್ಫೂರ್ತಿ ನೀಡುತ್ತದೆ.

ಅವರು ಇತ್ತೀಚೆಗೆ ವೀಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಅದು ಆಲ್ಪ್ಸ್‌ನ ಪಕ್ಷಿಯ ನೋಟವನ್ನು ತೋರಿಸಿದೆ. ವಿಡಿಯೋ ಕ್ಲಿಪ್ ಹದ್ದಿನ ಮುಖವನ್ನು ತೋರಿಸುತ್ತದೆ. ಸಣ್ಣ ಕ್ಯಾಮೆರಾವನ್ನು ಪಕ್ಷಿಯ ದೇಹಕ್ಕೆ ಜೋಡಿಸಿದ್ದು ಅದರ ಮೂಲಕ ಆಲ್ಪ್ಸ್‌ನ ಪಕ್ಷಿ ನೋಟವನ್ನು ಕಾಣಬಹುದು.

ಪಕ್ಷಿ ನೋಟವು ಸುಂದರವಾಗಿದ್ದಂತೆ ಆನಂದ್ ಮಹೀಂದ್ರಾ ಅವರ ಮಂಡೆ ಮೋಟಿವೇಷನ್ ಕೂಡ ಸುಂದರವಾಗಿದೆ.

ಈ ಭವ್ಯವಾದ ಹಕ್ಕಿಗೆ ಕೊಂಡಿಯಾಗಿರಿಸಿದ ಮಿನಿ-ಕ್ಯಾಮೆರಾ ಅಕ್ಷರಶಃ ಪಕ್ಷಿನೋಟವನ್ನು ಪಡೆಯಲು ನಮಗೆ ಅನುಮತಿಸುತ್ತದೆ. ಈಗಿನಿಂದಲೇ ಘೋರ ಕಾರ್ಯಗಳಲ್ಲಿ ಸಿಲುಕಿಕೊಳ್ಳುವ ಬದಲು ಯಾವಾಗಲೂ ದೊಡ್ಡ ಚಿತ್ರದೊಂದಿಗೆ ಪ್ರಾರಂಭಿಸಲು ಪ್ರಯತ್ನಿಸುವ ಮೂಲಕ ಒಂದು ವಾರವನ್ನು ಪ್ರಾರಂಭಿಸುವುದು ನನಗೆ ಉಪಯುಕ್ತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮೂಲತಃ ರೆಡ್ ಬುಲ್ ಅಲ್ಜೀರಿಯಾ ಹಂಚಿಕೊಂಡ ಕ್ಲಿಪ್ 1.4 ಮಿಲಿಯನ್ ವೀಕ್ಷಣೆ ಪಡೆದಿದೆ. ಟ್ವಿಟರ್ ಬಳಕೆದಾರರು ಆನಂದ್ ಮಹೀಂದ್ರಾ ಅವರಂತೆಯೇ ವೀಡಿಯೊ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...