ಪೋಸ್ಟ್ ಟೆಕ್ಸ್ಟಿಂಗ್ ಜಗತ್ತಿನಲ್ಲಿ ವೃದ್ಧರು ಹೇಗಿರುತ್ತಾರೆ…..? ಕರಾಳ ಕಾರ್ಟೂನ್ ಶೇರ್ ಮಾಡಿದ ಉದ್ಯಮಿ
28-11-2022 9:25PM IST / No Comments / Posted In: Latest News, India, Live News
ನಮ್ಮಲ್ಲಿ ಹೆಚ್ಚಿನವರು ಮೊಬೈಲ್ ಫೋನ್‌ಗಳಿಗೆ ಸಾಕಷ್ಟು ವ್ಯಸನಿಯಾಗಿದ್ದೇವೆ. ಇತ್ತೀಚಿನ ದಿನಗಳಲ್ಲಿ, ಒಂದು ಬಟನ್‌ನ ಕ್ಲಿಕ್‌ನಲ್ಲಿ ಎಲ್ಲವೂ ಲಭ್ಯವಿರುತ್ತದೆ ಮತ್ತು ಅದು ನಮ್ಮ ಅವಲಂಬನೆಯನ್ನು ಹೆಚ್ಚಿಸುತ್ತಿದೆ. ಸರಿ, ನಾವು ಇದ್ದಕ್ಕಿದ್ದಂತೆ ಈ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ ಎಂದು ನೀವು ಯೋಚಿಸುತ್ತಿರಬೇಕು. ಏಕೆಂದರೆ ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿರುವ ಕಾರ್ಟೂನ್ ಸಾಕಷ್ಟು ವೈರಲ್ ಆಗಿದ್ದು, ಮೊಬೈಲ್ ಫೋನ್ನ ವ್ಯಸನದ ಕರಾಳತೆಯನ್ನು ಬಿಚ್ಚಿಡುತ್ತದೆ.
ಒಂದು ವಿಷಾದಕರ ಚಿತ್ರವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಬರೀ ಸಂದೇಶಗಳನ್ನು ಕಳಿಸುವಲ್ಲಿ ನಿರತವಾಗಿರುವ ತಮ್ಮ ಪೋಸ್ಟ್-ಟೆಕ್ಸ್ಟಿಂಗ್ ಜಗತ್ತಿನಲ್ಲಿ ವೃದ್ಧಾಶ್ರಮದಲ್ಲಿರುವ ವೃದ್ಧರು ಮುಂದೊಂದು ದಿನ ಹೀಗೆ ಇರುತ್ತಾರೆ ಎನ್ನುವುದನ್ನು ಈ ಕಾರ್ಟೂನ್ ತೋರಿಸಿದೆ.
ಬಿಜಾರೋ ಕಾಮಿಕ್ಸ್ ಮಾಡಿದ ಕಾರ್ಟೂನ್ ಇದಾಗಿದೆ. ಇದನ್ನು 2012 ರಲ್ಲಿ ರಚಿಸಲಾಗಿತ್ತು. ಇದರಲ್ಲಿ ವೃದ್ಧಾಶ್ರಮದಲ್ಲಿ ಇರುವ ವೃದ್ಧರನ್ನು ತೋರಿಸಲಾಗಿದೆ. 10 ವರ್ಷಗಳ ಹಿಂದೆ ಇನ್ನೂ ಈ ಪರಿಯಲ್ಲಿ ಮೊಬೈಲ್ ಗೀಳು ಇಲ್ಲದಿರುವಾಗಲೇ ಈ ಕಾರ್ಟೂನ್ ರಚಿಸಲಾಗಿತ್ತು. ಇದೀಗ ಅಕ್ಷರಶಃ ಇದೇ ರೀತಿ ವೃದ್ಧಾಶ್ರಮಗಳಲ್ಲಿ ವೃದ್ಧರನ್ನು ಕಾಣಬಹುದಾಗಿದೆ ಎಂದು ಅವರು ವಿಷಾದಿಸಿದ್ದಾರೆ.
ಕಾರ್ಟೂನ್ನಲ್ಲಿ ವೃದ್ಧರ ಕುತ್ತಿಗೆಯನ್ನು ಅವರು ಮೊಬೈಲ್ ಫೋನ್‌ಗಳನ್ನು ನೋಡುತ್ತಿರುವಂತೆ ಬಾಗಿರುವುದು ಕಾಣಿಸುತ್ತದೆ. ಮತ್ತು ಅವರ ಕೈಗಳನ್ನು ಅವರು ಮೊಬೈಲ್ ಇಲ್ಲದಿದ್ದರೂ ಅದನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಈ ಕಾರ್ಟೂನ್ ನೋಡಿದರೆ ಈಗಿನ ಯುವಕರು ವೃದ್ಧರಾದಾಗ ಬದುಕು ಎಷ್ಟು ಕರಾಳತೆಯಿಂದ ಕೂಡಿರಬಹುದು ಎಂಬ ಅರಿವು ಆಗುತ್ತದೆ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.