alex Certify ಚುನಾವಣಾ ಕರ್ತವ್ಯಕ್ಕೆ ಹಿಮದ ನಡುವೆ ಅಧಿಕಾರಿಗಳ ಟ್ರೆಕಿಂಗ್: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣಾ ಕರ್ತವ್ಯಕ್ಕೆ ಹಿಮದ ನಡುವೆ ಅಧಿಕಾರಿಗಳ ಟ್ರೆಕಿಂಗ್: ವಿಡಿಯೋ ವೈರಲ್​

ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಅಧಿಕಾರಿಗಳು ಹಿಮದಲ್ಲಿ ಚಾರಣ ಮಾಡುತ್ತಿರುವ ಕುರಿತು ಪೋಸ್ಟ್ ಒಂದನ್ನು ಶೇರ್​ ಮಾಡಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ. ನವೆಂಬರ್ 12 ರಂದು ಹಿಮಾಚಲ ಪ್ರದೇಶ ವಿಧಾನಸಭೆಯ 68 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಈ ಸಂದರ್ಭದಲ್ಲಿ ಅಧಿಕಾರಿಗಳು ಚಾರಣ ಮಾಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಮಹೀಂದ್ರಾ ಅವರು ಹಂಚಿಕೊಂಡ ಈ ವಿಡಿಯೋದಲ್ಲಿ, ಅಧಿಕಾರಿಗಳು ಚಳಿಗಾಲದ ಬಟ್ಟೆಗಳನ್ನು ಧರಿಸಿ, ಉಪಕರಣಗಳನ್ನು ಹೊತ್ತುಕೊಂಡು ಹಿಮದಿಂದ ಆವೃತವಾದ ಪರ್ವತದ ಇಳಿಜಾರಿನಲ್ಲಿ ಹೋಗುವುದನ್ನು ನೋಡಬಹುದಾಗಿದೆ.

ಚಂಬಾ ಜಿಲ್ಲೆಯ ಪಾಂಗಿ ಪ್ರದೇಶದ ಭರ್ಮೌರ್ ವಿಧಾನಸಭಾ ಕ್ಷೇತ್ರದ ಚಸಕ್ ಬಟೋರಿ ಮತಗಟ್ಟೆಯಿಂದ ಅಧಿಕಾರಿಗಳು ಹಿಂತಿರುಗುತ್ತಿದ್ದರು. ಅವರು ಸುಮಾರು 15 ಕಿಲೋಮೀಟರ್ ಹಿಮದಲ್ಲಿ ಆರು ಗಂಟೆಗಳ ಕಾಲ ನಡೆದರು. ಹಿಮದಲ್ಲಿ 15 ಕಿಮೀ ಟ್ರೆಕ್ಕಿಂಗ್ ಮಾಡುವ ಮೂಲಕ ಅಧಿಕಾರಿಗಳು 12 ಸಾವಿರ ಅಡಿ ಎತ್ತರದ ಮತದಾನದ ಪ್ರದೇಶಕ್ಕೆ ಹೋಗುತ್ತಾರೆ ಎಂದು ಮಹೀಂದ್ರಾ ಬರೆದುಕೊಂಡಿದ್ದಾರೆ.

— anand mahindra (@anandmahindra) November 13, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...