
ಟ್ವಿಟ್ಟರ್ನಲ್ಲಿ ಮಹೀಂದ್ರಾ ಅವರು ಹಂಚಿಕೊಂಡ ಈ ವಿಡಿಯೋದಲ್ಲಿ, ಅಧಿಕಾರಿಗಳು ಚಳಿಗಾಲದ ಬಟ್ಟೆಗಳನ್ನು ಧರಿಸಿ, ಉಪಕರಣಗಳನ್ನು ಹೊತ್ತುಕೊಂಡು ಹಿಮದಿಂದ ಆವೃತವಾದ ಪರ್ವತದ ಇಳಿಜಾರಿನಲ್ಲಿ ಹೋಗುವುದನ್ನು ನೋಡಬಹುದಾಗಿದೆ.
ಚಂಬಾ ಜಿಲ್ಲೆಯ ಪಾಂಗಿ ಪ್ರದೇಶದ ಭರ್ಮೌರ್ ವಿಧಾನಸಭಾ ಕ್ಷೇತ್ರದ ಚಸಕ್ ಬಟೋರಿ ಮತಗಟ್ಟೆಯಿಂದ ಅಧಿಕಾರಿಗಳು ಹಿಂತಿರುಗುತ್ತಿದ್ದರು. ಅವರು ಸುಮಾರು 15 ಕಿಲೋಮೀಟರ್ ಹಿಮದಲ್ಲಿ ಆರು ಗಂಟೆಗಳ ಕಾಲ ನಡೆದರು. ಹಿಮದಲ್ಲಿ 15 ಕಿಮೀ ಟ್ರೆಕ್ಕಿಂಗ್ ಮಾಡುವ ಮೂಲಕ ಅಧಿಕಾರಿಗಳು 12 ಸಾವಿರ ಅಡಿ ಎತ್ತರದ ಮತದಾನದ ಪ್ರದೇಶಕ್ಕೆ ಹೋಗುತ್ತಾರೆ ಎಂದು ಮಹೀಂದ್ರಾ ಬರೆದುಕೊಂಡಿದ್ದಾರೆ.