
ಆನಂದ್ ಮಹಿಂದ್ರಾ ಕೂಡ ಈ ಸೋಮವಾರ “#MondayMotivation” ಹ್ಯಾಷ್ ಟ್ಯಾಗ್‌ನೊಂದಿಗೆ ಮಾಡಿದ ಟ್ವೀಟ್ ಬಹಳ ಪ್ರೇರಣಾದಾಯಿ ಆಗಿದೆ. ಅವರು ವಾರದ ಮೊದಲ ಕೆಲಸದ ದಿನವಾದ ಸೋಮವಾರವನ್ನು ಉತ್ತಮ ಪ್ರೇರಣೆಯೊಂದಿಗೆ ಆರಂಭಿಸಿದ್ದಾರೆ.
ಗಗನಯಾತ್ರಿ ಕ್ರಿಸ್ ಕ್ಯಾಸಿಡಿ ಅವರ ಟೈಮ್ ಲ್ಯಾಪ್ಸ್ ವಿಡಿಯೊವನ್ನು ಶೇರ್ ಮಾಡಿರುವ ಆನಂದ್ ಮಹಿಂದ್ರಾ, ಸಮ್ಮೋಹನಗೊಳಿಸುವಂತಹ ವಿಡಿಯೋ ಇದು. ಇದು ಅಕ್ಷರಶಃ ಪ್ರಪಂಚದ ಹೊರಗಿನ ದೃಶ್ಯ. ಈ ಗಗನಯಾತ್ರಿಯ ಕೆಲಸವು ನಿಜವಾಗಿಯೂ “#MondayMotivation” ಆಗಿದೆ. ಈ ವಿಡಿಯೋ ನೋಡಿಕೊಂಡು ಈ ವಾರ ನನ್ನ ಕೆಲಸಗಳು ನಿರ್ಣಾಯಕ ಮತ್ತು ಆಕರ್ಷಕವಾಗಿರುತ್ತದೆ ಎಂಬ ನಂಬಿಕೆಯೊಂದಿಗೆ ನನ್ನ ಕೆಲಸವನ್ನು ಆರಂಭಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಆನಂದ್ ಮಹೀಂದ್ರಾ ಶೇರ್ ಮಾಡಿದ ವಿಡಿಯೊವನ್ನು ಆರಂಭದಲ್ಲಿ ವಂಡರ್ ಆಫ್ ಸೈನ್ಸ್ ಟ್ವಿಟರ್ ಹ್ಯಾಂಡಲ್ ಪೋಸ್ಟ್ ಮಾಡಿದೆ. ” ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಭೂಮಿಯ ಸುತ್ತ ಸುತ್ತುತ್ತಿರುವ ಸಮಯದಲ್ಲಿ ಅದರ ಹೊರಗೆ ಕೆಲಸ ಮಾಡುತ್ತಿರುವ ಗಗನಯಾತ್ರಿ ಕ್ರಿಸ್ ಕ್ಯಾಸಿಡಿ” ಎಂಬ ಮೂಲಶೀರ್ಷಿಕೆಯನ್ನು ಹೊಂದಿದೆ.