alex Certify ವಿಶಿಷ್ಟ ಎಲೆಕ್ಟ್ರಿಕ್​ ವಾಹನದಿಂದ ಪ್ರಭಾವಿತರಾದ ಆನಂದ್​ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟ ಎಲೆಕ್ಟ್ರಿಕ್​ ವಾಹನದಿಂದ ಪ್ರಭಾವಿತರಾದ ಆನಂದ್​ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ 9.6 ಮಿಲಿಯನ್​ಗಿಂತಲೂ ಹೆಚ್ಚು ಟ್ವಿಟ್ಟರ್​ ಫಾಲೋಯರ್​ ಹೊಂದಿದ್ದು, ನೆಟ್ಟಿಗರ ಮುಂದೆ ಆವಿಷ್ಕಾರಗಳು ಮತ್ತು ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಅವರಿಗೆ ವಿಶಿಷ್ಟ ಎಲೆಕ್ಟ್ರಿಕ್​ ವಾಹನದ ಒಂದು ವಿಡಿಯೋ ಕಣ್ಣಿಗೆ ಬಿದ್ದಿದ್ದು, ಅದನ್ನು ಸಿದ್ಧಪಡಿಸಿದವರನ್ನು ಭೇಟಿ ಮಾಡುವುದಾಗಿ ಭರವಸೆಯನ್ನೂ ನೀಡಿದ್ದಾರೆ.

ಟ್ವಿಟ್ಟರ್​ ಬಳಕೆದಾರ ಎ. ಗೌತಮ್​ ವಿದ್ಯುತ್​ ಚಾಲಿತ ತನ್ನ ವಿಶಿಷ್ಟ ಜೀಪ್​ನ ವಿಡಿಯೋವನ್ನು ಹಂಚಿಕೊಂಡಿದ್ದರು. ಗೌತಮ್​ ತನ್ನ ಪೋಸ್ಟ್​ನಲ್ಲಿ ಮಹೀಂದ್ರಾ ಅವರನ್ನು ಟ್ಯಾಗ್​ ಸಹ ಮಾಡಿದ್ದರು.

ಹಾಗೆಯೇ ಮಹೀಂದ್ರಾ ಕೂಡ ಪ್ರತಿಭೆಯನ್ನು ಗುರುತಿಸಲಾಗುವುದು ಎಂಬ ಭರವಸೆ ನೀಡಿ, ಆ ಯುವಕನ ಆಸೆಯನ್ನು ನಿರಾಸೆಗೊಳಿಸಿಲ್ಲ.

ಕಾರುಗಳು ಮತ್ತು ತಂತ್ರಜ್ಞಾನಕ್ಕಾಗಿ ಜನರ ಉತ್ಸಾಹ ಮತ್ತು ಗ್ಯಾರೇಜ್​ ‘ಟಿಂಕರಿಂಗ್​’ ಮೂಲಕ ಅವರ ಆವಿಷ್ಕಾರದಿಂದಾಗಿ ಅಮೆರಿಕವು ಆಟೋಗಳಲ್ಲಿ ಪ್ರಾಬಲ್ಯ ಸಾಧಿಸಿದೆ ಎಂದು ನಾನು ನಂಬುತ್ತೇನೆ. ಇದನ್ನು ನೋಡಿ ಭಾರತವು ಇವಿಗಳಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದು ನನಗೆ ಮನವರಿಕೆಯಾಗಿದೆ. ಗೌತಮ್​ ಮತ್ತು ಅವರ ಕಲ್ಪನೆ ಪ್ರವರ್ಧಮಾನಕ್ಕೆ ಬರಲಿ ಎಂದು ಹಾರೈಸುವುದರ ಜತೆಗೆ ಸಂಪರ್ಕಕ್ಕೆ ಮಹೀಂದ್ರಾ ರೈಸ್​ ಉಪಾಧ್ಯಕ್ಷರಿಗೆ ಸೂಚನೆಯನ್ನು ನೀಡಿದ್ದಾರೆ. ಇದೆಲ್ಲವನ್ನೂ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆ ಯುವಕ ಹಂಚಿಕೊಂಡ ವಿಡಿಯೋದಲ್ಲಿ, ಎಲೆಕ್ಟ್ರಿಕ್​ ಜೀಪ್​ನ ಕೆಲಸ ಮಾಡುವ ಮತ್ತು ಅದನ್ನು ಓಡಿಸುವುದನ್ನು ಕಾಣಬಹುದು. ನಾವು ಈ ಜೀಪ್​ನ ಹಿಂಬದಿ ಮತ್ತು ಮುಂಭಾಗದ ಚಕ್ರವನ್ನು ಪ್ರತ್ಯೇಕವಾಗಿ ನಿಯಂತ್ರಿಸುತ್ತೇವೆ, ದಯವಿಟ್ಟು ನನಗೆ ಕೆಲಸ ಕೊಡಿ ಎಂದು ಮಹೀಂದ್ರಾರನ್ನು ಕೋರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...