ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ 9.6 ಮಿಲಿಯನ್ಗಿಂತಲೂ ಹೆಚ್ಚು ಟ್ವಿಟ್ಟರ್ ಫಾಲೋಯರ್ ಹೊಂದಿದ್ದು, ನೆಟ್ಟಿಗರ ಮುಂದೆ ಆವಿಷ್ಕಾರಗಳು ಮತ್ತು ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಅವರಿಗೆ ವಿಶಿಷ್ಟ ಎಲೆಕ್ಟ್ರಿಕ್ ವಾಹನದ ಒಂದು ವಿಡಿಯೋ ಕಣ್ಣಿಗೆ ಬಿದ್ದಿದ್ದು, ಅದನ್ನು ಸಿದ್ಧಪಡಿಸಿದವರನ್ನು ಭೇಟಿ ಮಾಡುವುದಾಗಿ ಭರವಸೆಯನ್ನೂ ನೀಡಿದ್ದಾರೆ.
ಟ್ವಿಟ್ಟರ್ ಬಳಕೆದಾರ ಎ. ಗೌತಮ್ ವಿದ್ಯುತ್ ಚಾಲಿತ ತನ್ನ ವಿಶಿಷ್ಟ ಜೀಪ್ನ ವಿಡಿಯೋವನ್ನು ಹಂಚಿಕೊಂಡಿದ್ದರು. ಗೌತಮ್ ತನ್ನ ಪೋಸ್ಟ್ನಲ್ಲಿ ಮಹೀಂದ್ರಾ ಅವರನ್ನು ಟ್ಯಾಗ್ ಸಹ ಮಾಡಿದ್ದರು.
ಹಾಗೆಯೇ ಮಹೀಂದ್ರಾ ಕೂಡ ಪ್ರತಿಭೆಯನ್ನು ಗುರುತಿಸಲಾಗುವುದು ಎಂಬ ಭರವಸೆ ನೀಡಿ, ಆ ಯುವಕನ ಆಸೆಯನ್ನು ನಿರಾಸೆಗೊಳಿಸಿಲ್ಲ.
ಕಾರುಗಳು ಮತ್ತು ತಂತ್ರಜ್ಞಾನಕ್ಕಾಗಿ ಜನರ ಉತ್ಸಾಹ ಮತ್ತು ಗ್ಯಾರೇಜ್ ‘ಟಿಂಕರಿಂಗ್’ ಮೂಲಕ ಅವರ ಆವಿಷ್ಕಾರದಿಂದಾಗಿ ಅಮೆರಿಕವು ಆಟೋಗಳಲ್ಲಿ ಪ್ರಾಬಲ್ಯ ಸಾಧಿಸಿದೆ ಎಂದು ನಾನು ನಂಬುತ್ತೇನೆ. ಇದನ್ನು ನೋಡಿ ಭಾರತವು ಇವಿಗಳಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದು ನನಗೆ ಮನವರಿಕೆಯಾಗಿದೆ. ಗೌತಮ್ ಮತ್ತು ಅವರ ಕಲ್ಪನೆ ಪ್ರವರ್ಧಮಾನಕ್ಕೆ ಬರಲಿ ಎಂದು ಹಾರೈಸುವುದರ ಜತೆಗೆ ಸಂಪರ್ಕಕ್ಕೆ ಮಹೀಂದ್ರಾ ರೈಸ್ ಉಪಾಧ್ಯಕ್ಷರಿಗೆ ಸೂಚನೆಯನ್ನು ನೀಡಿದ್ದಾರೆ. ಇದೆಲ್ಲವನ್ನೂ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆ ಯುವಕ ಹಂಚಿಕೊಂಡ ವಿಡಿಯೋದಲ್ಲಿ, ಎಲೆಕ್ಟ್ರಿಕ್ ಜೀಪ್ನ ಕೆಲಸ ಮಾಡುವ ಮತ್ತು ಅದನ್ನು ಓಡಿಸುವುದನ್ನು ಕಾಣಬಹುದು. ನಾವು ಈ ಜೀಪ್ನ ಹಿಂಬದಿ ಮತ್ತು ಮುಂಭಾಗದ ಚಕ್ರವನ್ನು ಪ್ರತ್ಯೇಕವಾಗಿ ನಿಯಂತ್ರಿಸುತ್ತೇವೆ, ದಯವಿಟ್ಟು ನನಗೆ ಕೆಲಸ ಕೊಡಿ ಎಂದು ಮಹೀಂದ್ರಾರನ್ನು ಕೋರಿದ್ದಾರೆ.