.jpg?U6qtp36OQb.CNrjMiP602TNZhhLcExyI&size=770:433)
ಸ್ಕ್ರಾಪ್ ನಿಂದ ಕಾರ್ ತಯಾರಿಸಿದ್ದ ದತ್ತಾತ್ರೇಯ ಅವ್ರನ್ನ ತಮ್ಮ ಶೋರೂಂಗೆ ಆಹ್ವಾನಿಸಿ ಹೊಚ್ಚ ಹೊಸ ಬೊಲೆರೊ ಉಡುಗೊರೆ ನೀಡಿರುವ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದತ್ತಾತ್ರೇಯ ಅವ್ರ ಕುಟುಂಬ ಕಾರು ಸ್ವೀಕರಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಅವರು ಧನ್ಯವಾದ ತಿಳಿಸಿದ್ದಾರೆ. ದತ್ತಾತ್ರೇಯ ಅವ್ರು ತಮ್ಮ ವಿಭಿನ್ನ ಆವಿಷ್ಕಾರದ ಬದಲಿಗೆ ನಮ್ಮ ಕಾರನ್ನು ವಿನಿಮಯ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಕ್ಕೆ ಖುಷಿಯಾಯಿತು. ಅವರ ಕುಟುಂಬವು ಬೊಲೆರೊವನ್ನು ಸ್ವೀಕರಿಸಿದೆ. ನಾವು ಅವರು ತಯಾರಿಸಿರುವ ವಾಹನದ ಜವಾಬ್ದಾರಿಯನ್ನು ಹೆಮ್ಮೆಯಿಂದ ವಹಿಸಿಕೊಂಡಿದ್ದೇವೆ. ಇದು ನಮ್ಮ ರಿಸರ್ಚ್ ವ್ಯಾಲಿಯಲ್ಲಿನ ಎಲ್ಲಾ ರೀತಿಯ ಕಾರುಗಳ ಸಂಗ್ರಹದ ಭಾಗವಾಗಿರುತ್ತದೆ ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ದತ್ತಾತ್ರೇಯ ಅವರು ತಮ್ಮ ಮಗನ ಆಸೆಯನ್ನು ಪೂರೈಸಲು ಸ್ಕ್ರಾಪ್ ಮೆಟಲ್ ಬಳಸಿ 60ಸಾವಿರ ವೆಚ್ಚದಲ್ಲಿ ವಾಹನವನ್ನು ನಿರ್ಮಿಸಿದ್ದರು. ಇದರಿಂದ ಇಂಪ್ರೆಸ್ ಆದ ಮಹೀಂದ್ರಾ ಅವರು ಅವರಿಗೆ ಈ ಅದ್ಭುತ ಉಡುಗೊರೆ ನೀಡಿದ್ದಾರೆ.