alex Certify ಬೇಕಾದಾಗ ಬಳಸಿ ಮಿಕ್ಕ ಸಮಯದಲ್ಲಿ ಮಡಚಿ ಇಡಬಹುದಾದ ಮೆಟ್ಟಿಲು..! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಕಾದಾಗ ಬಳಸಿ ಮಿಕ್ಕ ಸಮಯದಲ್ಲಿ ಮಡಚಿ ಇಡಬಹುದಾದ ಮೆಟ್ಟಿಲು..! ವಿಡಿಯೋ ವೈರಲ್​

ಮಹೀಂದ್ರಾ ಗ್ರೂಪ್​ ಅಧ್ಯಕ್ಷ ಆನಂದ್​ ಮಹೀಂದ್ರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿದ್ದಾರೆ. ಟ್ವಿಟರ್​ನಲ್ಲಿ ಸಾಕಷ್ಟು ವೈರಲ್​ ವಿಡಿಯೋಗಳನ್ನು ಶೇರ್​ ಮಾಡುವ ಮೂಲಕ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಲೇ ಇರ್ತಾರೆ.

ಇದೀಗ ಇದೇ ಸಾಲಿಗೆ ಮತ್ತೊಂದು ವಿಡಿಯೋವನ್ನು ಆನಂದ್​ ಮಹೀಂದ್ರಾ ಸೇರಿದ್ದಾರೆ. ಹೊಸ ಬಗೆಯ ಮೆಟ್ಟಿಲು ವಿನ್ಯಾಸದ ವಿಡಿಯೋವನ್ನು ಈ ಬಾರಿ ಆನಂದ್​ ಮಹೀಂದ್ರಾ ಹಂಚಿಕೊಂಡಿದ್ದಾರೆ.

ಈ ಬಾರಿ ವೈರಲ್​ ಆಗಿರುವ ವಿಡಿಯೋದಲ್ಲಿ ಮೆಟ್ಟಿಲುಗಳ ಮೇಲೆ ಕಾಂಪ್ಯಾಕ್ಟ್​ ವಿನ್ಯಾಸವನ್ನು ಕಾಣಬಹುದಾಗಿದೆ. ಅಂದರೆ ಈ ಮೆಟ್ಟಿಲನ್ನು ಬೇಕಾದ ಸಮಯದಲ್ಲಿ ಮಾತ್ರ ಬಳಕೆ ಮಾಡಿಕೊಂಡು ಮಿಕ್ಕ ಸಮಯದಲ್ಲಿ ಮಡಚಿ ಇಡಬಹುದಾಗಿದೆ. ಇದರಿಂದ ಜಾಗದ ಉಳಿತಾಯ ಕೂಡ ಆಗುತ್ತದೆ. ಅಲ್ಲದೇ ಈ ಮೆಟ್ಟಿಲು ಗಟ್ಟಿ ಮುಟ್ಟಾಗಿ ಕೂಡ ಇದೆ.

ಅದ್ಭುತ, ಸರಳವಾಗಿದ್ದು ಇದು ಕ್ರಿಯಾಶೀಲವಾಗಿದೆ. ಜಾಗವನ್ನು ವ್ಯರ್ಥ ಮಾಡುವ ಬದಲು ಈ ರೀತಿಯ ವಿನ್ಯಾಸವನ್ನು ಮಾಡಿದರೆ ಜಾಗ ಉಳಿತಾಯದ ಜೊತೆಯಲ್ಲಿ ಆಕರ್ಷಣೀಯವಾಗಿ ಕೂಡ ಕಾಣಲಿದೆ. ಇದು ಯಾವ ಸ್ಥಳದಲ್ಲಿ ಎಂಬುದು ನನಗೆ ತಿಳಿದಿಲ್ಲ ಎಂದು ಆನಂದ್​ ಮಹೀಂದ್ರಾ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ.

— anand mahindra (@anandmahindra) July 16, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...