
ಇದೀಗ ಇದೇ ಸಾಲಿಗೆ ಮತ್ತೊಂದು ವಿಡಿಯೋವನ್ನು ಆನಂದ್ ಮಹೀಂದ್ರಾ ಸೇರಿದ್ದಾರೆ. ಹೊಸ ಬಗೆಯ ಮೆಟ್ಟಿಲು ವಿನ್ಯಾಸದ ವಿಡಿಯೋವನ್ನು ಈ ಬಾರಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ.
ಈ ಬಾರಿ ವೈರಲ್ ಆಗಿರುವ ವಿಡಿಯೋದಲ್ಲಿ ಮೆಟ್ಟಿಲುಗಳ ಮೇಲೆ ಕಾಂಪ್ಯಾಕ್ಟ್ ವಿನ್ಯಾಸವನ್ನು ಕಾಣಬಹುದಾಗಿದೆ. ಅಂದರೆ ಈ ಮೆಟ್ಟಿಲನ್ನು ಬೇಕಾದ ಸಮಯದಲ್ಲಿ ಮಾತ್ರ ಬಳಕೆ ಮಾಡಿಕೊಂಡು ಮಿಕ್ಕ ಸಮಯದಲ್ಲಿ ಮಡಚಿ ಇಡಬಹುದಾಗಿದೆ. ಇದರಿಂದ ಜಾಗದ ಉಳಿತಾಯ ಕೂಡ ಆಗುತ್ತದೆ. ಅಲ್ಲದೇ ಈ ಮೆಟ್ಟಿಲು ಗಟ್ಟಿ ಮುಟ್ಟಾಗಿ ಕೂಡ ಇದೆ.
ಅದ್ಭುತ, ಸರಳವಾಗಿದ್ದು ಇದು ಕ್ರಿಯಾಶೀಲವಾಗಿದೆ. ಜಾಗವನ್ನು ವ್ಯರ್ಥ ಮಾಡುವ ಬದಲು ಈ ರೀತಿಯ ವಿನ್ಯಾಸವನ್ನು ಮಾಡಿದರೆ ಜಾಗ ಉಳಿತಾಯದ ಜೊತೆಯಲ್ಲಿ ಆಕರ್ಷಣೀಯವಾಗಿ ಕೂಡ ಕಾಣಲಿದೆ. ಇದು ಯಾವ ಸ್ಥಳದಲ್ಲಿ ಎಂಬುದು ನನಗೆ ತಿಳಿದಿಲ್ಲ ಎಂದು ಆನಂದ್ ಮಹೀಂದ್ರಾ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.