alex Certify ಬೆಂಗಳೂರಲ್ಲಿ ಅಮಾನವೀಯ ಘಟನೆ : ರಕ್ತ ಬರುವಂತೆ ವಿದ್ಯಾರ್ಥಿಗೆ ರಾಡ್ ನಿಂದ ಹೊಡೆದ ಶಿಕ್ಷಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ಅಮಾನವೀಯ ಘಟನೆ : ರಕ್ತ ಬರುವಂತೆ ವಿದ್ಯಾರ್ಥಿಗೆ ರಾಡ್ ನಿಂದ ಹೊಡೆದ ಶಿಕ್ಷಕಿ

ಬೆಂಗಳೂರು :  ಬೆಂಗಳೂರಿನ ಖಾಸಗಿ ಶಾಲೆಯಲ್ಲಿ  ಅಮಾನವೀಯ ಘಟನೆ ನಡೆದಿದ್ದು, ಶಿಕ್ಷಕಿಯೊಬ್ಬರು ರಕ್ತ ಬರುವಂತೆ ವಿದ್ಯಾರ್ಥಿಗೆ ರಾಡ್ ನಿಂದ ಹೊಡೆದಿದ್ದಾರೆ.

7 ನೇ ತರಗತಿ ವಿದ್ಯಾರ್ಥಿ  ಕೈಗೆ ರಾಡ್ ನಿಂದ ಹೊಡೆದು ಶಿಕ್ಷಕಿ ಮೃಗೀಯ ವರ್ತನೆ ತೋರಿದ್ದಾರೆ. ಪರಿಣಾಮ ವಿದ್ಯಾರ್ಥಿ ಫರ್ದಿನ್ ಕೈಗೆ ಗಂಭೀರ ಗಾಯಗಳಾಗಿದ್ದು, ಆರು ಹೊಲಿಗೆ ಹಾಕಲಾಗಿದೆ. ಹುಳಿಮಾವು ಸಾಯಿರಾಮ್ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಘಟನೆ ನಡೆದು 3 ದಿನಗಳಾದರೂ ಶಿಕ್ಷಕಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಬಿಇಒ ಶಾಲೆಗೆ ನೋಟಿಸ್ ನೀಡಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...