alex Certify Big News: 108 ಗಂಟೆಗಳಲ್ಲಿ 75 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: 108 ಗಂಟೆಗಳಲ್ಲಿ 75 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣ

ಮಹಾರಾಷ್ಟ್ರದ 75 ಕಿ.ಮೀ ಉದ್ದದ ಅಮರಾವತಿ – ಅಕೋಲಾ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ದಾಖಲೆ ಸಮಯದಲ್ಲಿ ನಿರ್ಮಾಣವಾಗಲಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿ ಜೂನ್ 3 ರಂದು ಆರಂಭವಾಗಿದ್ದು, ಜೂನ್ 7 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಅಮರಾವತಿಯ ಲೋಣಿ ಗ್ರಾಮದಿಂದ ಅಕೋಲಾದ ಮನ ಗ್ರಾಮದವರೆಗಿನ ಹೆದ್ದಾರಿಯನ್ನು ರಾತ್ರಿ ಹಗಲು ನಿರ್ಮಿಸಲಾಗುತ್ತಿದೆ. ಇದು ಕೇವಲ 108 ಗಂಟೆಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಪ್ರಯೋಗ ಯಶಸ್ವಿಯಾದರೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಅಮರಾವತಿ – ಅಕೋಲಾ ಹೆದ್ದಾರಿ ಕಾಮಗಾರಿ ಸೇರ್ಪಡೆಯಾಗಲಿದೆ. ಸ್ಥಳದಲ್ಲಿ ಗಿನ್ನಿಸ್ ಪುಸ್ತಕದ ತಂಡವೊಂದು ಹಾಜರಿದ್ದು, ರಸ್ತೆ ನಿರ್ಮಾಣ ಕಾಮಗಾರಿಯನ್ನು ದಾಖಲಿಸಿಕೊಳ್ಳುತ್ತಿದೆ.

ಪ್ರಧಾನಮಂತ್ರಿ ಗತಿ-ಶಕ್ತಿ ಹೆದ್ದಾರಿ ನಿರ್ಮಾಣ ಯೋಜನೆಯಂತೆ ಈ ಹೆದ್ದಾರಿ ನಿರ್ಮಾಣವಾಗುತ್ತಿದೆ. ಜನ ಸಂಚಾರ, ಸರಕು ಮತ್ತು ಸೇವೆಗಳಿಗಾಗಿ ಸಮಗ್ರ ಮತ್ತು ತಡೆರಹಿತ, ಬಹು-ಮಾದರಿ ಸಂಪರ್ಕವನ್ನು ಸಾಧಿಸುವುದು ಈ ಯೋಜನೆಯ ಉದ್ದೇಶ. ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಈ ಹೆದ್ದಾರಿಯನ್ನು ರಾಷ್ಟ್ರಕ್ಕೆ ಅರ್ಪಿಸಲು ರಾಜಪಥ ಇನ್‌ಫ್ರಾಕಾನ್‌ ನಿರ್ಧರಿಸಿದೆ.

ಮಾವನ ಮನೆ ಮುಂದೆ ನವ ವಧುವಿನ ಸಖತ್ ಡಾನ್ಸ್….!

ನಿರ್ಮಾಣಕ್ಕೆ ಆಧುನಿಕ ತಂತ್ರಜ್ಞಾನ ಮತ್ತು ಬಿಟುಮಿನಸ್ ಕಾಂಕ್ರೀಟ್ ಹೊಂದಿರುವ ಯಂತ್ರಗಳನ್ನು ಬಳಸಲಾಗುತ್ತಿದೆ. 800 -1,000 ಕಾರ್ಮಿಕರು ಕೆಲಸದಲ್ಲಿದ್ದಾರೆ. ಎಂತಹ ಸನ್ನಿವೇಶದಲ್ಲೂ ಈ ಹೆದ್ದಾರಿ ಕಾಮಗಾರಿಯನ್ನು ನಿಶ್ಚಿತ ಅವಧಿಯೊಳಗೆ ಪೂರ್ಣಗೊಳಿಸಲು ರಾಜ್ ಪಥ್ ಇನ್‌ಫ್ರಾಕಾನ್‌ ತೀರ್ಮಾನಿಸಿದೆ.

ಇದು ಹಿಂದಿನ ದಾಖಲೆ: ಕತಾರ್‌ನ ದೋಹಾದಲ್ಲಿ ಪಬ್ಲಿಕ್‌ ವರ್ಕ್ಸ್‌ ಅಥಾರಿಟಿ ಅಶ್ಘುಲ್‌, 242 ಗಂಟೆಗಳಲ್ಲಿ ಅಂದರೆ 10 ದಿನಗಳಲ್ಲಿ 25 ಕಿ.ಮೀ. ರಸ್ತೆ ನಿರ್ಮಿಸಿದ್ದು ಈ ಹಿಂದಿನ ದಾಖಲೆ. ಆ ದಾಖಲೆಯನ್ನು ಮುರಿಯಲು ರಾಜ್ ಪಥ್ ಇನ್ಫ್ರಾಕಾನ್ ಈಗ ಸಜ್ಜಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...