alex Certify ಕಾರಿನ ಹಿಂಬದಿ ಸೀಟಿನಲ್ಲಿ ಕೂತಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಹಿಂಬದಿ ಸೀಟಿನಲ್ಲಿ ಕೂತಿದ್ದೇನು ಗೊತ್ತಾ..?

ಇತ್ತೀಚಿನ ದಿನಗಳಲ್ಲಿನ ಯಾವುದೇ ಸಾಹಸವಿಲ್ಲದೆ ಯಾವುದೇ ದಿನ ಪೂರ್ಣಗೊಳ್ಳುವುದಿಲ್ಲ. ಇದು ಜೀವನವನ್ನು ಬದಲಾಯಿಸುವ ಅನುಭವವಾಗಿರಲಿ ಅಥವಾ ಸ್ವತಃ ನೀವೇ ನೋಡಿರುವ ದೃಶ್ಯವಾಗಿರಲಿ, ಅವುಗಳಲ್ಲಿ ಕೆಲವು ಮರೆಯಲಾರದಂತಹವು ಇರುತ್ತವೆ. ಅಯ್ಯೋ.. ಇವರೇನು ಪೀಠಿಕೆ ಕುಯ್ಯುತ್ತಿದ್ದಾರೆ ಅಂತಾ ತಲೆಕೆಡಿಸಿಕೊಳ್ಳಬೇಡಿ.. ಈ ಸ್ಟೋರಿ ಓದಿ.

ಹೌದು, ಜನರು ತಮ್ಮ ಕಾರಿನಲ್ಲಿ ಜೊತೆಗೆ ನಾಯಿಯನ್ನು ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದೆಡೆ ಕಾರಿನಲ್ಲಿ ಹಸುವನ್ನು ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಬೆತ್ತಲೆ ಫೋಟೋ, ವಿಡಿಯೋ: ಹುಡುಗಿಗೆ ಕಿರುಕುಳ ನೀಡಿದ ಇಬ್ಬರು ಅರೆಸ್ಟ್

ವಿಸ್ಕಾನ್ಸಿನ್ ನ ಜೆಸ್ಸಿಕಾ ಎಂಬ ಮಹಿಳೆ ಈ ಅಚ್ಚರಿಯ ದೃಶ್ಯವನ್ನು ವಿಡಿಯೋ ಮಾಡಿದ್ದಾಳೆ. ಕಾರಿನಲ್ಲಿನ ಹಿಂಬದಿಯ ಸೀಟಿನಲ್ಲಿ ಹಸುವನ್ನು ಕೂರಿಸಲಾಗಿದೆ. ಮೊದಲಿಗೆ ಈಕೆ ಇದು ನಕಲಿ ಇರಬಹುದು ಅಂತಾ ಅಂದಾಜಿಸಿದಳಂತೆ. ಆದರೆ ಹಸು ತನ್ನ ತಲೆಯನ್ನು ಅತ್ತ ಇತ್ತ ವಾಲಿಸಿದಾಗ ನಿಜಕ್ಕೂ ಒಂದು ಕ್ಷಣ ಶಾಕ್ ಗೆ ಒಳಗಾದಳಂತೆ. ಆದರೆ ಹಸು ಯಾವುದೇ ಅಳುಕಿಲ್ಲದೆ ಕಾರಿನಲ್ಲಿ ಕೂತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...