ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೇಡಿಕೆ ತುಂಬಾ ಹೆಚ್ಚಾಗ್ತಿದೆ. ಅನೇಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡ್ತಿವೆ. ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್ ಎಮೋ ಎಲೆಕ್ಟ್ರಿಕ್ ಬೈಕ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಜಾಂಟಿ ಪ್ಲಸ್ ಬಿಡುಗಡೆ ಮಾಡಿದೆ.
ಎಮೋ ಎಲೆಕ್ಟ್ರಿಕ್ ಬೈಕ್ ನ ಜಾಂಟಿ ಪ್ಲಸ್ ಇ-ಸ್ಕೂಟರ್ ಬೆಲೆ 1,10,460 ರೂಪಾಯಿಯಿಂದ ಆರಂಭವಾಗುತ್ತದೆ. ಗ್ರಾಹಕರಿಗೆ ಮೂರು ವರ್ಷಗಳ ವಾರಂಟಿ ಸಿಗಲಿದೆ. ಇದು ಐದು ಬಣ್ಣಗಳಲ್ಲಿ ಲಭ್ಯವಿದೆ. ಕೆಂಪು-ಕಪ್ಪು, ಬೂದು-ಕಪ್ಪು, ನೀಲಿ-ಕಪ್ಪು, ಬಿಳಿ-ಕಪ್ಪು ಮತ್ತು ಹಳದಿ-ಕಪ್ಪು ಬಣ್ಣದಲ್ಲಿ ಲಭ್ಯವಿದೆ.
ಜಾಂಟಿ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಸರಾಸರಿ ವೇಗ 120 ಕಿಲೋಮೀಟರ್. ಶೇಕಡಾ 100ರಷ್ಟು ಚಾರ್ಜ್ ಮಾಡಲು 4 ಗಂಟೆ ಬೇಕಾಗುತ್ತದೆ. 60V/40Ah ಸುಧಾರಿತ ಲಿಥಿಯಂ ಬ್ಯಾಟರಿಯನ್ನು ಇದಕ್ಕೆ ನೀಡಲಾಗಿದೆ. ಕ್ರೂಸ್ ಕಂಟ್ರೋಲ್ ಸ್ವಿಚ್, ಎಲೆಕ್ಟ್ರಾನಿಕ್ ಅಸಿಸ್ಟೆಡ್ ಬ್ರೇಕಿಂಗ್ ಸಿಸ್ಟಮ್ ಆಂಟಿ-ಥೆಫ್ಟ್ ಅಲಾರ್ಮ್ ಇದಕ್ಕೆ ನೀಡಲಾಗಿದೆ.
ಜಾಂಟಿ ಪ್ಲಸ್ ಮೊಬೈಲ್ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಲಭ್ಯವಿದೆ. ಎಮೋ ಎಲೆಕ್ಟ್ರಿಕಲ್ ಬೈಕ್ ಕಂಪನಿ, ಕೈಗೆಟುಕುವ ಇ-ಮೊಬಿಲಿಟಿ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದೆ ಎನ್ನಬಹುದು. ಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್, ಹೈ ಗ್ರೌಂಡ್ ಕ್ಲಿಯರೆನ್ಸ್, ಸೈಡ್ ಸ್ಟ್ಯಾಂಡ್ ಸೆನ್ಸರ್‌ಗಳು, ಸೆಂಟ್ರಲ್ ಲಾಕಿಂಗ್, ಫ್ರಂಟ್ ಡಿಸ್ಕ್ ಬ್ರೇಕ್, ಡಿಆರ್‌ಎಲ್ ಲೈಟ್‌ಗಳು ಮತ್ತು ಎಂಜಿನ್ ಕಿಲ್ ಸ್ವಿಚ್ ಇತರ ವೈಶಿಷ್ಟ್ಯಗಳು.