
ಮುರಿದ ಕಾಲ್ಬೆರಳುಗಳಿಗೆ ಹೆಚ್ಚಿನ ನೋವಾಗದಂತೆ ನೋಡಿಕೊಳ್ಳಲು ವಿಶೇಷ ಶೂಗಳನ್ನು ಧರಿಸಿರುವ ವಿಚಾರವನ್ನು ಅಮಿತಾಬ್ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಶೂಗಳು ಧರಿಸಿದರೆ ಸಾಕ್ಸ್ ಧರಿಸಿದಂತೆ ಭಾಸವಾಗುತ್ತದೆ ಎಂದು ಬಿಗ್‌ಬಿ ಹೇಳಿಕೊಂಡಿದ್ದಾರೆ.
ಸಂಕಷ್ಟದಲ್ಲಿರುವ ಜನತೆ ನೆರವಿಗೆ ಧಾವಿಸಿದ ಒಲಂಪಿಕ್ ಪದಕ ವಿಜೇತ
ಕೆಬಿಸಿ ಸೀಸನ್‌ನಲ್ಲಿ ತಮ್ಮ ಮ್ಯಾನರಿಸಂನಿಂದ ಅನೇಕ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿರುವ ಅಮಿತಾಬ್, ಇತ್ತೀಚೆಗೆ ’ಚೆಹ್ರೆ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
’ಬ್ರಹ್ಮಾಸ್ತ್ರ’ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ನಾಗಾರ್ಜುನ ಹಾಗೂ ಮೌನಿ ರಾಯ್ ಜೊತೆಗೆ ಬಿಗ್‌ಬಿ ತೆರೆ ಹಂಚಿಕೊಳ್ಳಲಿದ್ದಾರೆ.