alex Certify ಹಿಮನದಿ ಸ್ಪೋಟದಲ್ಲಿ ಕಣ್ಮರೆಯಾದ ಕಾರ್ಮಿಕರಿಗಾಗಿ ಕಾದು ಕುಳಿತಿದೆ ಈ ಶ್ವಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮನದಿ ಸ್ಪೋಟದಲ್ಲಿ ಕಣ್ಮರೆಯಾದ ಕಾರ್ಮಿಕರಿಗಾಗಿ ಕಾದು ಕುಳಿತಿದೆ ಈ ಶ್ವಾನ….!

ಶ್ವಾನಗಳು ಮಾನವನ ಪಾಲಿಗೆ ಅತ್ಯಂತ ನಂಬಿಗಸ್ಥ ಪ್ರಾಣಿ ಅನ್ನೋ ಮಾತಿಗೆ ಸಾಕ್ಷ್ಯಗಳು ಸಾವಿರಾರು ಸಿಗ್ತವೆ. ಮಾಲೀಕನಿಗಾಗಿ ಶ್ವಾನಗಳು ಯಾವ ಸವಾಲನ್ನೂ ಎದುರಿಸೋಕೆ ಸಿದ್ಧವಾಗಿರುತ್ತವೆ. ಇದೇ ರೀತಿ ಉತ್ತರಾಖಂಡ್​​ನಲ್ಲೂ ಶ್ವಾನದ ಸ್ವಾಮಿನಿಷ್ಠೆಯ ಘಟನೆಯೊಂದು ಬೆಳಕಿಗೆ ಬಂದಿದೆ.

2 ವರ್ಷದ ಭುಟಿಯಾ ತಳಿಯ ಬ್ಲ್ಯಾಕಿ ಎಂಬ ಹೆಸರಿನ ಶ್ವಾನ ಹಿಮನದಿ ಸ್ಪೋಟದಿಂದ ಹಾನಿಗೊಳಗಾಗಿರುವ ತಪೋವನ ಡ್ಯಾಂನ ಸುರಂಗದ ಎದುರು ಕುಳಿತು ತನ್ನ ಮಾಲೀಕನಿಗಾಗಿ ಎದುರು ನೋಡಿದೆ. ಚಮೋಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಕಳೆದ ಮೂರು ದಿನಗಳಿಂದ ಈ ನಾಯಿ ಇದೇ ರೀತಿ ಕುಳಿತಿದ್ದು ತನ್ನ ಮಾಲೀಕರು ವಾಪಸ್​ ಬರ್ತಾರೆ ಎಂದು ಕಾಯುತ್ತಿದೆ.

ಎನ್​ಟಿಪಿಸಿಯ ಹೈಡಲ್​ ಯೋಜನೆ ನಡೆಯುತ್ತಿರುವ ಪ್ರದೇಶದ ಬಳಿಯಲ್ಲೇ ಬ್ಲ್ಯಾಕಿ ಜನಿಸಿತ್ತು. ಇಲ್ಲಿನ ಕೆಲಸಗಾರರ ಜೊತೆಯೇ ಬೆಳೆದಿದ್ದ ಬ್ಲ್ಯಾಕಿ ಅವರನ್ನೆಲ್ಲಾ ಹಚ್ಚಿಕೊಂಡಿತ್ತು. ಆದರೆ ಹಿಮನದಿ ಸ್ಪೋಟದಿಂದ ಕಾರ್ಮಿಕರು ಕಣ್ಮರೆಯಾಗಿದ್ದಾರೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲೇ ಮೂರು ದಿನಗಳಿಂದ ಕಾದು ಕುಳಿತಿರುವ ಈ ಶ್ವಾನ ತನ್ನ ಪ್ರೀತಿಯ ಕಾರ್ಮಿಕರ ಆಗಮನಕ್ಕಾಗಿ ಕಾಯುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...