ಇ ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ 20 ಸಾವಿರ ಡಿಜಿಟಲ್ ಸಾಧನಗಳನ್ನು ಉಚಿತವಾಗಿ ಒದಗಿಸುವುದಾಗಿ ಹೇಳಿಕೆ ನೀಡಿದೆ.
‘ಡೆಲಿವರಿಂಗ್ ಸ್ಮೈಲ್’ (ನಗುವಿನ ವಿತರಣೆ) ಎಂಬ ಕಾರ್ಯಕ್ರಮದ ಅಡಿಯಲ್ಲಿ 150ಕ್ಕೂ ಅಧಿಕ ದೊಡ್ಡ ಹಾಗೂ ಸಣ್ಣ ಲಾಭರಹಿತ ಸಂಸ್ಥೆಗಳ ಸಹಭಾಗಿತ್ವದಲ್ಲಿ ದೇಶಾದ್ಯಂತ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೆರವಾಗಲು ಅಮೆಜಾನ್ ಇಂಡಿಯಾ ಮುಂದಾಗಿದೆ.
ʼನವರಾತ್ರಿʼಯಲ್ಲಿ ಉಪವಾಸ ವೃತ ದೋಷವಾದ್ರೆ ಏನು ಮಾಡ್ಬೇಕು…..?
ಹಿಂದುಳಿದ ಮಕ್ಕಳ ಕಲ್ಯಾಣಕ್ಕಾಗಿ ಅಮೆಜಾನ್ ಕಂಪನಿಯು 20 ಸಾವಿರ ಡಿಜಿಟಲ್ ಸಾಧನಗಳನ್ನು ನೇರವಾಗಿ ಮಕ್ಕಳಿಗೆ ವಿತರಣೆ ಮಾಡಲಿದೆ.
ಇದಕ್ಕಾಗಿ 150 ಸಣ್ಣ ಹಾಗೂ ದೊಡ್ಡ ಲಾಭರಹಿತ ಸಂಸ್ಥೆಗಳು ಸಹಯೋಗವನ್ನು ನೀಡಿದ್ದು ಒಟ್ಟು 1 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗಲು ಉದ್ದೇಶಿಸಿದ್ದೇವೆ. ಈ 150 ಸಂಸ್ಥೆಗಳಲ್ಲಿ 100 ಲಾಭರಹಿತ ಪಾಲುದಾರರನ್ನು ಅಮೆಜಾನ್ನ ಈ ಕಾರ್ಯಕ್ರಮಕ್ಕೆ ಆಂತರಿಕ ಉದ್ಯೋಗಿಗಳ ನಾಮನಿರ್ದೇಶನದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಅಮೆಜಾನ್ ಇಂಡಿಯಾ ಹೇಳಿದೆ.
ಅಂಚೆ ಇಲಾಖೆ ವಿಮೆ ಪಾಲಿಸಿ ಪಡೆದವರಿಗೊಂದು ಮಹತ್ವದ ಮಾಹಿತಿ
ಅಮೆಜಾನ್ ಗ್ರಾಹಕರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದಾಗಿದೆ. ನಗದು ಅಥವಾ ತಮ್ಮ ಹಳೆಯ ಮೊಬೈಲ್ ಫೋನ್ಗಳನ್ನು ನೀಡಿದ್ದಲ್ಲಿ ಅದನ್ನು ಸರಿಪಡಿಸಿ ಅಮೆಜಾನ್, ಮಕ್ಕಳಿಗೆ ನೀಡಲಿದೆ. 1 ಲಕ್ಷ ಹಿಂದುಳಿದ ವರ್ಗಗಳ ಮಕ್ಕಳಿಗೆ ನೆರವಾಗುವುದು ಅಮೆಜಾನ್ ಉದ್ದೇಶವಾಗಿದೆ.